ಅಪಘಾತದಿಂದ ನಡೆಯಲಾರದ ಸ್ಥಿತಿಯಲ್ಲಿರುವ ತಿಲಕರಾಜ್ ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಪಘಾತದಿಂದ ನಡೆಯಲಾರದ ಸ್ಥಿತಿಯಲ್ಲಿರುವ ತಿಲಕರಾಜ್ ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ

Share This
ಬಂಟ್ಸ್ ನ್ಯೂಸ್, ಕಾಸರಗೋಡು : ಬೈಕ್ ಅಪಘಾತದಿಂದಾಗಿ ಕಾಲಿನ ಶಕ್ತಿ ಕಳೆದು ಕೊಂಡು 6 ತಿಂಗಳಿನಿಂದ ಹಾಸಿಗೆಯಲ್ಲಿರುವ ಕಾಸರಗೋಡು ಕಣ್ಣೂರಿನ ತಿಲಕರಾಜ್ ಅವರಿಗೆ ಸಹೃದಯಿಗಳ ಸಹಾಯ ಹಸ್ತ ಬೇಕಾಗಿದೆ.
ಮನೆಯ ಆಧಾರಸ್ತಂಭವಾಗಿದ್ದ ತಿಲಕರಾಜ್ ಅವರ ಬಲಗಾಲು ಅಪಘಾತದಿಂದ ಬಲ ಕಳೆದುಕೊಂಡಿದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ತಾಯಿ ವಾರಿಜ ಅವರು ತಿಲಕರಾಜ್ ಅವರ ಚಿಕಿತ್ಸೆಗಾಗಿ ಈಗಾಗಲೇ 1.50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಸರಿ ಸುಮಾರು 50 ಸಾವಿರದಷ್ಟು ಕೈಸಾಲ ಮಾಡಿಕೊಂಡಿದ್ದು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ.

ಗಂಡನನ್ನು ಕಳೆದುಕೊಂಡಿರುವ ವಾರಿಜ ಅವರ ಕುಟುಂಬಕ್ಕೆ ತಿಲಕರಾಜ್ ಆಧಾರಸ್ತಂಭವಾಗಿ ಮನೆಯ ಜವಾಬ್ದಾರಿ ನೋಡಿಕೊಂಡಿದ್ದ. ತಿಲಕರಾಜ್ ಅಪಘಾತವಾದ ನಂತರ ಮನೆಯ ನಿರ್ವಹಣೆಗೆ ದಿಕ್ಕಿಲ್ಲದೆ ಕುಟುಂಬ ತೀರ ಕಷ್ಟದಲ್ಲಿದೆ. ಮನೆ ನಿರ್ಮಾಣದ ಕಾರ್ಯವು ಅರ್ಧಕ್ಕೆ ನಿಂತಿದ್ದು ಅರೆಬರೆ ಪೂರ್ಣವಾದ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಸ್ವಾಭಿಮಾನಿ ಯುವಕನಾಗಿದ್ದ ತಿಲಕರಾಜ್ ತನಾಗದ ಪರಿಸ್ಥಿತಿ ಹಾಗೂ ಕುಟುಂಬ ನಿರ್ವಹಣೆಗೆ ತಾಯಿ ವಾರಿಜ ಪಡುತ್ತಿರುವ ಕಷ್ಟ ನೋಡಲಾಗದೆ ಆತ್ಮಹತ್ಯೆಯ ಪ್ರಯತ್ನ ಪಟ್ಟಿದ್ದ ಎನ್ನಾಲಾಗಿದೆ. ಇಂತಹ ತೀರ ಕಷ್ಟದಲ್ಲಿರುವ ವಾರಿಜ ಅವರ ಕುಟುಂಬಕ್ಕೆ ಸಹೃದಯಿ ದಾನಿಗಳ ನೆರವಿನ ಅಗತ್ಯವಿದೆ.

ವಾರಿಜ ಅವರ ಕುಟುಂಬಕ್ಕೆ ಹಾಗೂ ತಿಲಕರಾಜ್ ಅವರ ಚಿಕಿತ್ಸೆಗೆ ನೆರವಾಗ ಬಯಸುವ ದಾನಿಗಳು ಈ ಬ್ಯಾಂಕ್ ಅಕೌಂಟಿಗೆ ತಮ್ಮ ಸಹಾಯ ಧನವನ್ನು ಕಳುಹಿಸಬಹುದು. Name :Varija, Bank Name : Kerala Gramin Bank, A/c No: 40417100900001, IFSC Code : KLGB0040417. ಸಂಪರ್ಕ ಸಂಖ್ಯೆ 9448153464 – ಯಶು ಪಕಳ (ಸಾಮಾಜಿಕ ಕಾರ್ಯಕರ್ತ)

Pages