ಮಂಗಳೂರು : ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆಯುವ ಐಎಫ್‍ಎಂಎ ಸೀನಿಯರ್ ವಲ್ಡ್ ಮುಯೆಥಾಯ್ ಚಾಂಪಿಯನ್ಶಿಪ್ 2021ಕ್ಕೆ ಅನ್ವಿತಾ ಆಳ್ವ ಹಾಗೂ ಅನೀಶಾ ಶೆಟ್ಟಿ ಅವರು ಭಾರತದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.
ಮಂಗಳೂರಿನ ಪ್ರಥಮ ಮಹಿಳಾ ಮುಯೆಥೈ ಆಟಗಾರರಾಗಿರುವ ಅನ್ವಿತಾ ಆಳ್ವ ಅವರು ಎರಡು ಬಾರಿ ನ್ಯಾಶನಲ್ ಮುಯೆಥೈ ಚಾಂಪಿಯನ್ ಆಗಿದ್ದಾರೆ. ಪ್ಲೈವೆಟ್ ವುಮೆನ್ಸ್ ಮುಯೆಥೈ ಲೀಗ್ ಚಾಂಪಿಯನ್ 2018 ಮತ್ತು ಇಂಟರ್‍ನ್ಯಾಷನಲ್ ಸಿಲ್ವರ್ ಮೆಡಲಿಸ್ಟ್ ಇನ್ ಡಬ್ಲ್ಯು ಡಬ್ಲ್ಯು ಎಫ್ ಚಾಂಪಿಯನ್ 2017, ಬ್ಯಾಂಕಾಕ್’ನಲ್ಲಿ ನಡೆದ ಸಿನಿಯರ್ ವಲ್ಡ್ ಮುಯೆಥಾಯ್ ಚಾಂಪಿಯನ್’ಶಿಪ್ 2019ರಲ್ಲಿ 57ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಇವರು ತಡಂಬೈಲ್ ಜಯರಾಮ ಆಳ್ವರ ಪುತ್ರಿಯಾಗಿದ್ದಾಳೆ.
ಅನ್ವಿತಾ ಆಳ್ವ ಮತ್ತು ಅನೀಶಾ ಶೆಟ್ಟಿ ಅವರು ಮಂಗಳೂರಿನ ಮೊದಲ ಹಾಗೂ ಭಾರತದ ಪ್ರಸ್ತುತ ಉತ್ತಮ ಮುಯೆಥಾಯ್ ಕ್ರೀಡಾಪಟುಗಳಾಗಿದ್ದಾರೆ. ಇವರಿಬ್ಬರೂ ಮಂಗಳೂರಿನ ಮಂಕಿ ಮುಯೆಥಾಯ್ ಫೈಟ್ ಕ್ಲಬ್’ ಸದಸ್ಯರಾಗಿದ್ದು ನಿತೇಶ್ ಚಂದ್ರ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.