ಕಾರ್ಕಳ : ಬಂಟರ ಯಾನೆ ನಾಡವರ ಸಂಘ (ರಿ) ಹೆಬ್ರಿ - ಅಜೆಕಾರು ವಲಯದ ಬಂಟರ ಸಮಾವೇಶ ಹಾಗೂ ಮಹಾಸಭೆಯು ಡಿ. 5ರ ರವಿವಾರ ನಡೆಯಲಿದೆ.
ಕಾರ್ಯಕ್ರಮವು ಶ್ರೀಮತಿ ಸುಭೋದ ಬಲ್ಲಾಳ್ ಬಂಟರ ಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ನಡೆಯಲಿದೆ.
ಬಂಟರ ಸಮಾವೇಶವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ - ಅಜೆಕಾರು ವಲಯದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಉಡುಪಿ ನಗರಸಭೆ ಪೌರಾಯುಕ್ತ ಡಾ| ಉದಯ ಶೆಟ್ಟಿ, ಶಿವಪುರ ನವೀನ್ ಶೆಟ್ಟಿ ಬೆಹರಿನ್ ಭಾಗವಹಿಸಿಲಿರುವರು.