ಪುತ್ತೂರು : ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ತಾಲ್ಲೂಕಿನ ಬನ್ನೂರು ಭರತ್ ಭಂಡಾರಿಯವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.


ಭರತ್ ಭಂಡಾರಿ ಅವರಿಗೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವ ಮೊದಲು ಜ್ವರ ಕಾಣಿಸಿಕೊಂಡಿದ್ದು ನಂತರ ಜಾಂಡಿಸ್ ಹಂತ ತಲುಪಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ದಾಖಲಿಸಿ ವೈದ್ಯರು ಪರಿಶೀಲಿಸಿ ಜಾಂಡಿಸ್ ಹೆಚ್ಚಾಗಿ ಲೀವರ್ ಸಂಬಂಧಿತ ರೋಗ ವಾಗಿದ್ದು ದೇಹ ಸ್ಥಿತಿ ಕ್ಷಿಣವಾಗುತ್ತಿದ್ದು ಲೀವರ್ ಮರು ಜೋಡಣೆ ಮಾಡಿದರೆ ಉತ್ತಮ ಎಂದೂ ವೈದ್ಯರು ತಿಳಿಸಿದ್ದು ಚಿಕಿತ್ಸೆ ನೀಡುತ್ತಿದ್ದರು.
ಆದರೆ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.