ಬಂಟ್ಸ್ ನ್ಯೂಸ್, ಮುಂಬಾಯಿ : ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವಲ್ಲಿ ಪ್ರಸ್ತಾವನೆಯನ್ನು ಮಂಡಿಸಿ ಅನುಮೋದನೆ ಪಡೆದ ಉತ್ತರ ಮುಂಬಯಿಯ ಸಂಸದರಾದ ಗೋಪಾಲ ಶೆಟ್ಟಿಯವರನ್ನು ಫೆಡರೇಷನ್ ಆಫ್ ಹೋಟೇಲ್ ಆಂಡ್ ರೆಸ್ಟೋರಂಟ್ ಅಸೋಶಿಯೆಶನ್ ಮಹಾರಾಷ್ಟ ಇದರ ನೂತನ ಅಧ್ಯಕ್ಷ ಹಾಗೂ ರೈಲ್ವೆ ಯಾತ್ರಿ ಸೇವಾ ಸಂಘ ಬೋರಿವಲಿ ಇದರ ಗೌರವ ಅಧ್ಯಕ್ಷರಾದ ಡಾ. ವಿರಾರ್ ಶಂಕರ ಶೆಟ್ಟಿಯವರು ಹೂಗುಚ್ಚ ನೀಡಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ರೈಲ್ವೆ ಯಾತ್ರಿ ಸೇವಾ ಸಂಘ ಬೋರಿವಲಿ ಇದರ ಕಾರ್ಯದರ್ಶಿ ಪ್ರೇಮನಾಥ ಕೋಟ್ಯಾನ್, ಉಪಾಧ್ಯಕ್ಷ ರಜಿತ್ ಸುವರ್ಣ ಉಪಸ್ಥಿತರಿದ್ದರು.