ಬಂಟ್ಸ್ ನ್ಯೂಸ್, ಯುಎಇ: ತುಳುನಾಡಿನ ಬಂಟ ಮನೆತನದ ಕುಡಿ ಮನೋಜ್ ಶೆಟ್ಟಿ ಪಡುಬಿದ್ರೆಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ 2021- 22ನೇ ವರ್ಷದ "ಅಂತರಾಷ್ಟ್ರೀಯ ಮಿಸ್ಟರ್ ಯುಎಇ" ಕೀರಿಟ ಲಭಿಸಿದೆ.
2021 ಡಿಸೆಂಬರ್ 11ರಂದು ದುಬೈನ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಬೀಯಿಂಗ್ ಮುಸ್ಕಾನ್ ಸಂಸ್ಥಾಪಕಿ, ಮೀನಾ ಅಸ್ರಾಣಿ ಅವರು "ಯುಎಇ ಇಂಟರ್‌ನ್ಯಾಶನಲ್ 2021" ಪ್ರಶಸ್ತಿ ಪ್ರದಾನಗೈದರು.
ಮಾಡೆಲ್ , ಕ್ರೀಡಾಪಟು, ಫ್ಯಾಷನ್ ಟ್ರೆಂಡ್‌ಸೆಟರ್ ಮತ್ತು ನಟರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾ ಸಾಧಕ ಮನೋಜ್ ಶೆಟ್ಟಿ ಅವರು ಈ ಬಾರಿಯ ಮಿಸ್ಟರ್ UAE ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದಿರುವುದು ತುಳುನಾಡ ಜನತೆಗೆ ಅಭಿಮಾನ ಮೂಡಿಸಿದೆ.
ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಮಿಸ್ಟರ್ ಯುಎಇ ಸ್ಪರ್ಧಾರ್ಥಿಗಳಲ್ಲಿ ಮನುಷ್ಯನ ಎಲ್ಲಾ ಗುಣಗಳನ್ನು ಪರೀಕ್ಷಿಸಿ ಮೌಲ್ಯ ಮಾಪನ ಮಾಡಿ ಮಿಸ್ಟರ್ ಯುಎಇ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಮನೋಜ್ ಶೆಟ್ಟಿ ಅವರು ಎಲ್ಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿ ಬಹು ಪ್ರತಿಭೆಯನ್ನು ಪ್ರದರ್ಶಿಸಿದ ಕಾರಣ ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ 2021 ಪ್ರಶಸ್ತಿಯನ್ನು ಗೆದ್ದರು. ಫ್ಯಾಷನ್ ಮತ್ತು ಮಾಡೆಲ್ ರಂಗದ ಹೆಸರಾಂತ ತೀರ್ಪುಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರನ್ನು ಆಯ್ಕೆ ಮಾಡಿದ್ದರು.
ಈ ಸಂದರ್ಭದಲ್ಲಿ ನೆರೆದ ಹಲವಾರು ಪ್ರಸಿದ್ಧ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. (ವರದಿ: ವಿಜಯಕುಮಾರ್ ಶೆಟ್ಟಿ ಮಜಿಬೈಲು (ದುಬೈ)