ಮಂಗಳೂರು : ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲಾ 317 ಡಿ ಇದರ ವತಿಯಿಂದ ನಡೆದಂತಹ ಕಲಾರಂಗ್ 2021 ಜಿಲ್ಲಾ ಸಾಂಸ್ಕೃತಿಕ ಸಂಭ್ರಮದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್‌ಬೈಲ್ ಮತ್ತು ಲಿಯೋ ಕ್ಲಬ್ ಮಂಗಳೂರು ಕೊಡಿಯಾಲ್‌ಬೈಲ್ ಪ್ರಥಮ ಬಹುಮಾನವನ್ನು ಪಡೆದಿರುತ್ತದೆ.
ಕಲಾರಂಗ್ ಎಲ್ಲಾ ವಿಭಾಗದಲ್ಲಿ ಪ್ರಥಮ, ಅತ್ಯುತ್ತಮ ನಿರೂಪಕರು ಇದರಲ್ಲಿ ತೃತೀಯ, ಸೋಲೊ ವಿಭಾಗದಲ್ಲಿ ವಿಶೇಷ ಬಹುಮಾನ ಗ್ರೂಪ್ ಡಾನ್ಸ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.
ಈ ಕಾರ್ಯಕ್ರಮದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಮೋಹನ್ ಆಳ್ವ, ಮೇಯರ್ ಪ್ರೇಮಾನಂದ ಶೆಟ್ಟಿ, ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ವಸಂತ್ ಶೆಟ್ಟಿ, 1ನೇ ವಿಡಿಜಿ ಸಂಜಿತ್ ಶೆಟ್ಟಿ, 2ನೇ ವಿಡಿಜಿ ಮೇಲ್ವಿನ್ ಡಿಸೋಜ, ಸಂಯೋಜಕರಾದ ಚಂದ್ರಹಾಸ್ ರೈ, ಕೊಡಿಯಾಲ್‌ಬೈಲ್ ಅಧ್ಯಕ್ಷರಾದ ಮೋಹನ್ ಕೊಪ್ಪಳ, ಕಾರ್ಯದರ್ಶಿಗಳಾದ ವಿನೂತನ್ ಕಲಿವೀರ್ ಹಾಗೂ ಕೋಶಾಧಿಕಾರಿಗಳಾದ ಕಿಶೋರ್ ಡಿ ಶೆಟ್ಟಿ ಮತ್ತು ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.