ಕಂಬುಲ ಕ್ಷೇತ್ರದಲ್ಲಿ ಮಿನುಗುತ್ತಿರುವ ಪನ್ವೆಲ್ ನಿವಾಸಿ ಮಾರ್ಪಳ್ಳಿ ಪ್ರತಿಷ್ಠಿತ ಕಂಬಳ ಮನೆ ರಾಜೇಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಂಬುಲ ಕ್ಷೇತ್ರದಲ್ಲಿ ಮಿನುಗುತ್ತಿರುವ ಪನ್ವೆಲ್ ನಿವಾಸಿ ಮಾರ್ಪಳ್ಳಿ ಪ್ರತಿಷ್ಠಿತ ಕಂಬಳ ಮನೆ ರಾಜೇಶ್ ಶೆಟ್ಟಿ

Share This

ನವಿ ಮುಂಬೈಯ ಪನ್ವೆಲ್ ಪರಿಸರದ ತುಳು-ಕನ್ನಡಿಗರು ಮತ್ತು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಯಶಸ್ವಿ ಹೋಟೆಲ್ ಮಾರ್ಪಳ್ಳಿ ರಾಜೇಶ್ ಶೆಟ್ಟಿ 

ಬಂಟ್ಸ್ ನ್ಯೂಸ್, ಉಡುಪಿ : ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಎಂಬ ಊರಿನ ಕಂಬಳ ಮನೆಯೆಂದೇ ಪ್ರಸಿದ್ಧಿ ಪಡೆದ ಮನೆಯಲ್ಲಿ ಜನಿಸಿ ತನ್ನ ಬಾಲ್ಯವನ್ನು ಕಂಬುಲದ ಕೋಣಗಳ ಸೇವೆಯಲ್ಲಿ ತೊಡಗಿ ಪ್ರತಿವರ್ಷ ನಡೆಯುವ ಊರಿನ ಕಂಬಳ ಕೂಟದಲ್ಲಿ ಭಾಗವಹಿಸಿ ಕಂಬಳದ ಎಲ್ಲಾ ರೀತಿ, ರಿವಾಜುಗಳನ್ನು ಬಾಲ್ಯದಿಂದಲೇ ಹತ್ತಿರದಿಂದ ನೋಡಿ ತಾನು ಕೂಡ ದೊಡ್ಡವನಾಗಿ ಕಂಬಳದ ಕೋಣಗಳನ್ನು ಸಾಕಿ ಕಂಬಳ ಕ್ಷೇತ್ರದಲ್ಲಿ ಪ್ರಸಿದ್ಧಿ ಪ್ರತಿಷ್ಠೆ ವರ್ಚಸ್ಸು ಹೆಸರು ಎಲ್ಲವನ್ನು ಪಡೆದ ತನ್ನ ಅಜ್ಜ ದಿವಂಗತ ಶ್ರೀಯುತ ಕೊರಗ ಶೆಟ್ಟಿ ಯವರ ಹೆಸರನ್ನು ಸದಾ ಉಳಿಸಿಕೊಂಡು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಕನಸು ಕಂಡವರು ಮಾರ್ಪಳ್ಳಿ ರಾಜೇಶ್ ಶೆಟ್ಟಿಯವರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ ಪರ ಊರಿಗೆ ಬಂದವರು ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ರಾತ್ರಿ ಶಾಲೆಗೆ ಹೋಗಿ ಪದವಿಯನ್ನು ಪಡೆದವರು ಕ್ರಮೇಣ ತನ್ನ ಸ್ವಂತ ಉದ್ಯಮವನ್ನು ಸ್ಥಾಪಿಸಿ ತಾನೊಬ್ಬ ಉದ್ಯೋಗಪತಿ ಎಂಬುದನ್ನು ಸಾಬೀತುಪಡಿಸಿ ಅದರಲ್ಲಿ ತುಂಬಾ ಉನ್ನತಿಯನ್ನು ಪಡೆದರು ಕಷ್ಟ-ಸುಖಗಳನ್ನು ಹತ್ತಿರದಲ್ಲಿ ಕಂಡ ಇವರು ಕಷ್ಟದಲ್ಲಿರುವವರಿಗೆ ಸದಾ ಸಹಾಯ ಹಸ್ತ ನೀಡುತ್ತ ಕೊಡುಗೈದಾನಿಯಾಗಿ ಎಲ್ಲರೊಂದಿಗೆ ಬೆರೆತು ತನ್ನನ್ನು ತಾನು ಸಮಾಜಸೇವೆಯಲ್ಲಿ ತೊಡಗಿಸಿ ಊರಿನ ಹಾಗೂ ಪರವೂರಿನ ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.

ತಾನು ಬಾಲ್ಯದಲ್ಲಿ ಕಂಡ ಕನಸು ನನಸಾಗಲು ತುಂಬಾ ಶ್ರಮವಹಿಸಿ ಈಗ ಅದನ್ನು ಸಾಧಿಸುವತ್ತ ತುಂಬಾ ದೊಡ್ಡ ಹೆಜ್ಜೆಯನ್ನಿಟ್ಟಿದ್ದಾರೆ ಮನೆಯಲ್ಲಿ ಕಂಬಳದ ಕೋಣಗಳನ್ನು ಸಾಕಿ ಊರಿನಲ್ಲಿ ನಡೆಯುವ ಹಲವಾರು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ ಅದರಲ್ಲಿ ಮುಖ್ಯವಾಗಿ ಸತ್ಯಧರ್ಮ ಜೋಡ ಕೆರೆ ಕಂಬಳ ಬೆಳ್ತಂಗಡಿ ಇಲ್ಲಿ 89 ಜೋಡಿ ಕೋಣಗಳ ಪೈಕಿ ನೇಗಿಲು ಹಿರಿಯ ಇದರಲ್ಲಿ ಪ್ರಥಮ ಸ್ಥಾನ ಹಾಗೂ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಮೂಡಬಿದ್ರೆ ಇಲ್ಲಿ ದ್ವಿತೀಯ ಸ್ಥಾನ ಹಾಗೂ ನಿಂಜೂರು ಇಲ್ಲಿ ನಡೆದ ಕಂಬಳದಲ್ಲಿ ದ್ವಿತೀಯ ಸ್ಥಾನ ಹೀಗೆ ಹಲವಾರು ಕಡೆ ಬಹುಮಾನವನ್ನು ಪಡೆದು ಪ್ರಸಿದ್ಧಿ ಪಡೆದಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವರು ಪರಮ ಭಕ್ತರಾಗಿರುವ ರಾಜೇಶ್ ಶೆಟ್ಟಿಯ ಕಂಬುಲ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಉದ್ಯೋಗದಲ್ಲಿ ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇವೆ. (ಗುರು ಶೆಟ್ಟಿ ಪನ್ವೇಲ್) 

Pages