ಬೆಂಗಳೂರು : ರಾಜ್ಯ ಸರಕಾರದಿಂದ ಹೊರನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಡುಪಿ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ ಅವರು ಇಂದು ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಶ್ರೀಚಂದ್ರಶೇಖರ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಕರ್ನಾಟಕ ಎನ್‌ಆರ್‌ಐ ಫೋರಂನ ಅಧ್ಯಕ್ಷ, ಫೋರ್ಚುನ್ ಗ್ರೂಪ್‌ನ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ಮಾಡಿರುವ ಕನ್ನಡ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರವು ಹೊರನಾಡ ಕನ್ನಡಿಗ ವಿಭಾಗದಲ್ಲಿ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಯೋಗ್ಯರನ್ನು ಗುರುತಿಸಿದೆ. ಪ್ರವೀಣ್ ಶೆಟ್ಟಿ ಅವರು ಕನ್ನಡ, ನಾಡು, ನುಡಿ, ಕನ್ನಡಿಗರಿಗಾಗಿ ಮಾಡುತ್ತಿರುವ ಸೇವೆಯು ಅನನ್ಯವಾಗಿದೆ ಎಂದು ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.
ತಮ್ಮ ಉದ್ಯಮದಲ್ಲಿ ಕನ್ನಡಿಗರಿಗೆ ವಿಶೇಷ ಒತ್ತು ನೀಡುವ ಮೂಲಕ ಕನ್ನಡಿಗರ ಪಾಲಿನ ಉದ್ಯೋಗದಾತರಾಗಿದ್ದಾರೆ. ಮುಂದಿನ ದಿನಗಳಲ್ಲೂ ಉದ್ಯೋಗದಲ್ಲಿ ಆಯ್ಕೆ ಮಾಡುವ ವೇಳೆ ಯೋಗ್ಯ ಕನ್ನಡಗರಿಗೆ ವಿಶೇಷ ಒತ್ತು ನೀಡುವಂತೆ ಸಲಹೆ ನೀಡಿದ ಸ್ವಾಮೀಜಿ, ಆಶ್ರಮದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್,ರಾಹುಲ್ ಸಿ ಭಟ್,ವಕ್ವಾಡಿ ಪ್ರವೀಣ್ ಶೆಟ್ಟಿ ಅವರ ಪತ್ನಿ ರೂಪಾ ಶೆಟ್ಟಿ ನಿವೃತ್ತ ಪೊಲೀಸ್ ಅಧಿಕಾರಿ ಜಿ. ಎ ಬಾವ,ಉದ್ಯಮಿ ಪರ್ವತ ಶೆಟ್ಟಿ, ಉಪಸ್ಥಿತರಿದ್ದರು.