ಬೆಂಗಳೂರು : ಸಮಾಜ ಸಾಮ್ರಾಟ ಬಂಟರೆದೆಯ ಮಾಣಿಕ್ಯ ಸಮಾಜಮುಖಿ ಜನಪರ ಸತ್ಕಾರ್ಯಗಳ ಸೇವಾಕಾರ್ಯದಲ್ಲಿ ದೇವರನ್ನು ಕಾಣುವ ಅರ್ಥರ ಧ್ವನಿಗೆ ಧ್ವನಿಗೂಡಿಸಿದ ಸದ್ಗುಣ ಸಂಪನ್ನ ಅಸೀಮ ಸಶಕ್ತ ಯಶಸ್ವಿ ಸಂಘಟಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಬೆಂಗಳೂರು ಬಂಟರ ಸಂಘದಿಂದ ಬಂಟರ ಕಣ್ಮಣಿ ಕೀರ್ತಿ ಶೇಷ ಶ್ರೀ ಸುಂದರ ರಾಮ್ ಶೆಟ್ಟಿ ಸ್ಮಾರಕ ಸರ್ವಶ್ರೇಷ್ಠ ಪ್ರಶಸ್ತಿ ಪುರಸ್ಕಾರ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಅವರು ಬೆಂಗಳೂರು ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನ.7ರಂದು ಪ್ರದಾನಿಸಿದರು.
ಈ ಸಂಧರ್ಭ ಕೆ. ಪ್ರಕಾಶ್ ಶೆಟ್ಟಿ, ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಭೋಜರಾಜ ಶೆಟ್ಟಿ, ಶ್ರೀಮತಿ ಅಮೃತ ಶೆಟ್ಟಿ ,ಕೋಶಾಧಿಕಾರಿ ದೀಪಕ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸೌಮ್ಯಪ್ರಿಯ ಹೆಗ್ಡೆ, ವಿದ್ಯಾರ್ಥಿವೇತನ ಸಮಿತಿ ಚೇರ್ ಪರ್ಸನ್ ಪ್ರವೀಣ್ ಚಂದ್ರ ಶೆಟ್ಟಿ, ಡಾಕ್ಟರ್ ಸುಧಾಕರ್ ಶೆಟ್ಟಿ, ಗುರುಕಿರಣ್, ಜಗನ್ನಾಥ ಶೆಟ್ಟಿ, ಐ.ಎಂ ರಾಜಾರಾಮ ಶೆಟ್ಟಿ ಉಪಸ್ಥಿತರಿದ್ದರು.