ಬಂಟ್ವಾಳ : ಬಂಟ್ವಾಳ ತಾಲೂಕು ವಿಟ್ಲ - ಪಡ್ನೂರು ಗ್ರಾಮದ ಶಶಾಂಕ್ ಜೈಶಂಕರ್ ರೈ ಅವರು ಭಾರತೀಯ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸಾಲೆತ್ತೂರು ವಲಯ ಬಂಟರ ಸಂಘದ, ವಿಟ್ಲ-ಪಡ್ನೂರು ಗ್ರಾಮದ ಚೆಂಬರಡ್ಕ ಬಬಿತಾ ರೈ ಹಾಗೂ ಜೈಶಂಕರ್ ರೈ ಅವರ ಪುತ್ರ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಶಾಂಕ್ ಜೈಶಂಕರ್ ರೈ ಅವರು ನವೆಂಬರ್ 15 ರಿಂದ 20ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುವ ಸಾಬಾ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತೀಯ ಬಾಸ್ಕೆಟ್ ಬಾಲ್ ತಂಡದಲ್ಲಿ ಸ್ಥಾನ ಪಡೆದ ಶಶಾಂಕ್ ಜೈಶಂಕರ್ ರೈ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಸಮಸ್ತ ಬಂಟ ಬಾಂಧವರ ಹಾರ್ದಿಕ ಅಭಿನಂದನೆಗಳು.