ಸುಹಾನಿ ಕುಲಾಲ್ ರ ಕ್ಯಾನ್ಸರ್ ಚಿಕಿತ್ಸೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೆರವು - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುಹಾನಿ ಕುಲಾಲ್ ರ ಕ್ಯಾನ್ಸರ್ ಚಿಕಿತ್ಸೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೆರವು

Share This
ಮಂಗಳೂರು : ಅಶೋಕನಗರದ ದಿ. ಯೋಗೀಶ್ ಕುಲಾಲ್ ಅವರ 18 ವರ್ಷದ ಸುಪುತ್ರಿ ಸುಹಾನಿ ಕುಲಾಲ್ ಎಲುಬು ಕ್ಯಾನ್ಸರ್ ಚಿಕಿತ್ಸೆಗಾಗಿ ಕುಲಾಲ ಪ್ರತಿಷ್ಠಾನ ಅಧ್ಯಕ್ಷರು ಸುರೇಶ್ ಕುಲಾಲ್ ಮತ್ತು ಟ್ರಸ್ಟಿ ಪ್ರೇಮಾನಂದ ಕುಲಾಲ್ ರವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ್ ಶೆಟ್ಟಿ ಅವರಿಗೆ ಮನವಿ ಮಾಡಿದ್ದರು.
ಮನವಿಯನ್ನು ಸ್ವೀಕರಿಸಿ ಕೂಡಲೇ ಸ್ಪಂದಿಸಿ ಸುಹಾನಿ ಕುಲಾಲರ ಎಲುಬು ಕ್ಯಾನ್ಸರ್ ಚಿಕಿತ್ಸೆಗೆ ದೇಣಿಗೆಯನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಮಂಗಳೂರಿನ ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯಾಲಯದಲ್ಲಿ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸುಹಾನಿ ಕುಲಾಲ್ ಅವರ ತಾಯಿಗೆ ಹಣವನ್ನು ಹಸ್ತಾಂತರಿಸಿದ್ದಾರೆ.

ಜಾತಿಯ ಪರಿಧಿಯನ್ನು ಮೀರಿ ಬಡಕುಟುಂಬಕ್ಕೆ ಆಶ್ರಯವಾದ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾಗಿರುವ ಐಕಳ ಹರೀಶ್ ಶೆಟ್ಟಿ ಅವರಿಗೆ ಮತ್ತು ಪದಾಧಿಕಾರಿಗಳಿಗೆ ಕುಲಾಲ ಪ್ರತಿಷ್ಠಾನ (ರಿ) ಮಂಗಳೂರು ಇವರ ಪರವಾಗಿ ಕೃತಜ್ಞತೆಗಳು. 

ಸುಹಾನಿ ಕುಲಾಲ್ ಗೆ ಸಹಕಾರ ನೀಡುವರು ಈ ಬ್ಯಾಂಕ್ ಖಾತೆಗೆ ಕಳಿಸಬಹುದು. Name : GEETHA BALI M, A/c number : 0178101015971, Bank name: CANARA BANK - Branch: KUNTIKAN, MANGALORE
IFSC : CNRB0000178

Pages