ನ. 20 : ಮೀರಾ ರೋಡ್ ಉದಯ ಶೆಟ್ಟಿ ಮಿತ್ರ ಮಂಡಳಿ ವತಿಯಿಂದ ರಕ್ತದಾನ ಶಿಬಿರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ. 20 : ಮೀರಾ ರೋಡ್ ಉದಯ ಶೆಟ್ಟಿ ಮಿತ್ರ ಮಂಡಳಿ ವತಿಯಿಂದ ರಕ್ತದಾನ ಶಿಬಿರ

Share This
ಮುಂಬಯಿ, ನ. 20: ನಗರದ ಯಶಸ್ವಿ ಉದ್ಯಮಿ, ರಾಜಕೀಯ ಧುರೀಣ, ಬಂಟರ ಸಂಘ ಮುಂಬಯಿ ಇದರ ಮೀರಾ - ಭಾಯಂದರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಉದಯ ಶೆಟ್ಟಿ ಪೆಲತ್ತೂರು ಇವರ ಹುಟ್ಟು ಹಬ್ಬದ ಪ್ರಯುಕ್ತ ಉದಯ ಶೆಟ್ಟಿ ಮಿತ್ರ ಮಂಡಳಿ ವತಿಯಿಂದ ದಿನಾಂಕ 20-11-2021 ನೇ ಶನಿವಾರ ಮೀರಾ ರೋಡ್ ಪೂರ್ವ, ಸಿ/ 32, ಹರಿಯಾಸ್ ಡ್ರೀಮ್ ಪಾರ್ಕ್ ಅಶೋಕ ಹೋಟೆಲ್‌ನ ಹಿಂದೆ, ಮೀರಾ ಭಾಯಂದರ್ ರೋಡ್ ಇಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.ಕೊರೋನ ಮಹಾಮಾರಿಯ ವಿರುದ್ಧ ಹೋರಾಡಲು ಸರ್ಕಾರ ಲಾಕ್ ಡೌನ್ ಘೋಷಣೆಯನ್ನು ಮಾಡಿದ ಸಂದರ್ಭ ದೈನಂದಿನ ಅವಶ್ಯಕತೆಗಳಿಗೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಮನಗಂಡ ಉದಯ ಶೆಟ್ಟಿ ಮಿತ್ರ ಮಂಡಳಿ ಸಂಕಷ್ಟದಲ್ಲಿ ಇರುವ ಸ್ಥಳೀಯ ಜನರಿಗೆ ದಿನನಿತ್ಯದ ಆಹಾರ ಸಾಮಗ್ರಿಗಳ ಪೊಟ್ಟಣಗಳನ್ನು ನೇರವಾಗಿ ಮನೆಗೆ ತಲುಪಿಸಲು ಸಹಕರಿಸಿರುವುದು ಮತ್ತು ಉಚಿತ ಕೋವಿಡ್ ಲಸಿಕೆಯನ್ನು ಹಾಕಿಸಲು ಸಹಕರಿಸಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಹೋಟೆಲ್ ಮಾಲಿಕರ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಸದಾ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಮೀರಾ - ಭಯಂದರ್ ಪ್ರದೇಶದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಸಮಾಜ ಸೇವಕ ಉದಯ ಶೆಟ್ಟಿ ಪೆಲತ್ತೂರುರವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಇವರ ಮಿತ್ರ ಮಂಡಳಿಯವರು ಆಯೋಜಿಸಿರುವ ರಕ್ತದಾನ ಶಿಬಿರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4:30 ರವರೆಗೆ ನಡೆಯಲಿರುವ ರಕ್ತದಾನ ಶಿಬಿರದಲ್ಲಿ ತುಳು - ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ 91671818181

Pages