ಮಂಗಳೂರು : ವಿಧಾನ ಪರಿಷತ್ ಚುನಾವಣಾಗೆ ಸ್ಪರ್ಧಿಸುತ್ತಿರುವ ಡಾ| ಎಮ್. ಎನ್ ರಾಜೇಂದ್ರ ಕುಮಾರ್ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಬೆಂಬಲ ಸೂಚಿಸಿದ ಐಕಳ ಹರೀಶ್ ಶೆಟ್ಟಿ ಅವರು ಹೆಚ್ಚಿನ ಮತಗಳಿಂದ ವಿಜಯಿಶಾಲಿಯಾಗುವಂತೆ ಹಾರೈಸಿದರು.
ಅವರು ನ.16ರಂದು ಡಾ| ಎಮ್. ಎನ್ ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟವು 120 ಬಂಟರ ಸಂಘಗಳ ಮಾತೃಸಂಘ. ದಾನಿಗಳ ಸಹಾಯದಿಂದ ಎಲ್ಲಾ ಧರ್ಮದ, ಜಾತಿಯ ಕಷ್ಟದಲ್ಲಿರುವವರ ನೆರಳಾಗಿ ಒಕ್ಕೂಟವು ಸೇವೆ ನೀಡುತ್ತಿದೆ. ಒಕ್ಕೂಟಕ್ಕೆ ಬಂಟರನ್ನು ಬಿಟ್ಟು ಬೇರೆ ಸಮಾಜದವರು ದಾನ ನೀಡಿದ್ದರೆ ಅದು ಡಾ| ಎಮ್. ಎನ್ ರಾಜೇಂದ್ರ ಕುಮಾರ್. ಎಲ್ಲಾ ಧರ್ಮ, ಸಮಾಜವರನ್ನ ಒಂದಾಗಿ ಕಂಡು ಜನರ ಸೇವೆ ಮಾಡುವ ವ್ಯಕ್ತಿ ಎಂದು ಶ್ಲಾಘಿಸಿದರು.
ಸಮಾಜ ಸೇವೆ ಮಾಡುವ ವ್ಯಕ್ತಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ. ರಾಜೇಂದ್ರ ಕುಮಾರ್ ಅವರನ್ನು ನಾವೆಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸೋಣ. ಒಕ್ಕೂಟದ ಎಷ್ಟು ಮತಗಳಿವೆಯೋ ಅದೆಲ್ಲವು ರಾಜೇಂದ್ರ ಕುಮಾರ್ ಅವರಿಗೆ ಸಿಗಲಿ. ಮುಂದೆ ಮಂತ್ರಿ ಪದವಿ ಕೂಡ ಅವರಿಗೆ ಲಭಿಸಿ ಹೆಚ್ಚಿನ ಸಮಾಜ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.