ಮಂಗಳೂರು : ನಗರದ ಕೊಡಿಕಲ್ ನಾಗಬ್ರಹ್ಮಸ್ಥಾನದ ನಾಗನ ಕಲ್ಲನ್ನು ಕಿಡಿಗೇಡಿಗಳು ಕಿತ್ತು ಎಸೆದು ವಿಕೃತಿ ಮೆರೆದಿದ್ದಾರೆ. 24 ಗಂಟೆಯಲ್ಲಿ ತಪ್ಪಿತಸ್ಥರನ್ನು ಬಂಧಿಸದೆ ಹೋದಲ್ಲಿ ನ. 15 ಸೋಮವಾರ ಕೊಡಿಕಲ್ ಬಂದ್ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದೆ.
ಘಟನೆ ಅರಿವಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಜನಸ್ತೋಮ ಸೇರಿ ಪ್ರತಿಭಟನೆ ನಡೆಸಿದ್ದಾರೆ. ತುಳುನಾಡಿನ ಆರಾಧನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ನಾಗಬ್ರಹ್ಮಸ್ಥಾನಕ್ಕೆ ಈ ರೀತಿ ಮಾಡಿರುವುದು ಭಕ್ತ ಸಮೂಹದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಪ್ಪಿತಸ್ಥರನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.