ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಪಟ್ಲ ಫೌಂಡೇಶನ್ ಟ್ರಸ್ಟ್'ನಿಂದ ಕಲಾವಿದರಿಗೆ ಸಹಾಯಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಪಟ್ಲ ಫೌಂಡೇಶನ್ ಟ್ರಸ್ಟ್'ನಿಂದ ಕಲಾವಿದರಿಗೆ ಸಹಾಯಧನ

Share This
ಮಂಗಳೂರು : ಯಕ್ಷದ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು, ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಆಡಳಿತ ಸಮಿತಿ ಹಾಗೂ ಅಡ್ಯಾರು ಗ್ರಾಮದ ನಾಗರಿಕರಿಂದ ಸ್ಯಾಂಡಲ್ ವುಡ್ ನ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇವರಿಗೆ ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮ ಅಡ್ಯಾರ್ ಶ್ರೀ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಜರಗಿತು.
ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಕೀರ್ತಿಶೇಷ ರಾಮಣ್ಣ ನಾಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ ತನ್ನ ಪ್ರಬುದ್ಧ ನಟನೆಯಿಂದಾಗಿ ಜನಮಾನಸದಲ್ಲಿ ಮನೆ ಮಾತಾಗಿದ್ದ ಪುನೀತ್ ರಾಜ್‌ಕುಮಾರ್ ಶ್ರೇಷ್ಠ ಕಲಾವಿದ, ಮಾತ್ರವಲ್ಲದೆ ಹೃದಯವಂತನಾಗಿ, ಸರಳ ನಡೆ ನುಡಿಯಿಂದ, ಸಮಾಜಮುಖಿ ಕಾರ್ಯಗಳಿಂದಾಗಿ, ಕನ್ನಡಿಗರ ಪ್ರೀತಿಯ ಅಪ್ಪುವಾಗಿ, "ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ "ಎಂಬಂತೆ ಜನಪರ ಕಾರ್ಯಯೋಜನೆಗಳ ಮುಖಾಂತರ ಸಹಸ್ರಾರು ಕುಟುಂಬಗಳ ನಂದಾದೀಪವಾಗಿ ಬೆಳಗಿದವರು. ಆದರೆ ಆ ನಂದಾದೀಪ ಆರಿ ಹೋಗಿ ಚಿತ್ರೋದ್ಯಮಕ್ಕೆ ಮಾತ್ರವಲ್ಲದೆ ಸಮಸ್ತ ಕನ್ನಡಾಭಿಮಾನಿಗಳಿಗೆ, ಕಲಾಭಿಮಾನಿಗಳಿಗೆ ಮರೆಯಲಾಗದ ನೋವನ್ನು ಉಂಟು ಮಾಡಿದೆ ಎಂದರು.

ಪುನೀತ್‌ರವರ ಕುಟಂಬದೊಂದಿಗೆ ನಿಕಟ ಸಂಪರ್ಕ ಸಂಬಂಧವನ್ನು ಮೆಲುಕು ಹಾಕಿದ ಪಟ್ಲರು ಕೆಲ ದಿನಗಳ ಹಿಂದೆ ಪುನೀತ್‌ರವರೊಡನೆ ಕಳೆದ ಕ್ಷಣಗಳನ್ನು ನೆನೆದು ಗದ್ಗತಿತರಾದರು. ಪುನೀತ್ ಸ್ಮರಣಾರ್ಥವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ನೇಪಥ್ಯ ಕಲಾವಿದರಾಗಿ(ರಂಗಸ್ಥಳದ ಗುಂಡಿ ತೆಗೆಯುತ್ತಾ, ರಂಗಸ್ಥಳದಲ್ಲಿ ತೆರೆದೊಂದಿ ಹಿಡಿಯುತ್ತಾ ಕರ್ತವ್ಯ ನಿರ್ವಹಿಸಿದ ಬಡ ಕುಟುಂಬದ) ಕಲಾವಿದ ರಘು ನಾಳರವರ ಮಗಳ ಮದುವೆಗಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ 50 ಸಾವಿರ ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಲ್ಲಾಳ್‌ರವರು ಗೌರವಪೂರ್ವಕವಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ 50 ಜನ ಅಡ್ಯಾರು ಗ್ರಾಮದ ಗ್ರಾಮಸ್ಥರು ನೇತ್ರದಾನವನ್ನು ಮಾಡುವ ಸಂಕಲ್ಪವನ್ನು ಕೈಗೊಂಡರು. ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ತುಂಬೆ, ದ.ಕ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ , ರೋಟರಿ ಕ್ಲಬ್ ಫರಂಗಿಪೇಟೆಯ ಅಧ್ಯಕ್ಷ ರೊ| ಸುರೇಂದ್ರ ಕಂಬಳಿ ನುಡಿನಮನ ಸಲ್ಲಿಸಿದರು. 

ಮಂದಿರದ ಗೌರವಾಧ್ಯಕ್ಷ ಎ. ದಿವಾಕರ್ ನಾಕ್, ಎ. ಮಾಧವ ನಾಕ್, ಶಿವರಾಜ್ ಶೆಟ್ಟಿ, ಪಟ್ಲ ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಅಶ್ವಿಥ್ ಶೆಟ್ಟಿ , ಹರ್ಷ ಕುಮಾರ್ ಶೆಟ್ಟಿ, ರತ್ನಾಕರ ಅಮೀನ್, ದೇವಿ ಕಿರಣ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಇಂದಿರಾ ಶೆಟ್ಟಿ, ಪದ್ಮಜ ಭಂಡಾರಿ, ಮೋಹಿನಿ ಶಂಕರ್, ಶಕಿಲಾ ಎಂ ನಾಕ್, ರಾಜ್‌ಕುಮಾರ್ ನಾಕ್ , ಪ್ರವೀಣ್ ಕುಮಾರ್, ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು ಕಾರ್ಯಕ್ರಮ ನಿರ್ವಹಿಸಿದರು.

Pages