ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ವಸತಿರಹಿತರಿಗೆ ಮನೆ ನಿರ್ಮಾಣ ಅನಾರೋಗ್ಯ ಪೀಡಿತರಿಗೆ ಸಹಾಯಧನ ಶಿಕ್ಷಣಕ್ಕೆ ಪ್ರೋತ್ಸಾಹ ಹೆಣ್ಣು ಮಕ್ಕಳ ವಿವಾಹದ ಪ್ರೋತ್ಸಾಹಧನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ತನ್ನ ಪದಾಧಿಕಾರಿಗಳೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ಸಂಯೋಜಿಸಿಕೊಂಡು ಬಂದಿರುತ್ತಾರೆ.
ಎಲ್ಲ ಕಾರ್ಯಕ್ರಮಗಳು ದಾನಿಗಳ ನೆರವಿನಿಂದ ನಡೆಯುತ್ತಿದ್ದು ಒಕ್ಕೂಟಕ್ಕೆ ಯಾವುದೇ ರೀತಿಯ ಆದಾಯದ ಮೂಲಗಳು ಇಲ್ಲದೆ ಸಮಾಜದ ಉಳ್ಳವ ರಿಂದ ಪಡೆದುಕೊಂಡು ಇಲ್ಲದವರಿಗೆ ನೀಡಿ ಆರ್ಥಿಕವಾಗಿ ಹಿಂದುಳಿದವರ ಕಣ್ಣೊರೆಸುವ ಕೆಲಸ ನಡೆಯುತ್ತಿದೆ. ಇನ್ನೂ ಅನೇಕ ಕೆಲಸಗಳು ನಡೆಯಬೇಕಾಗಿರುವುದರಿಂದ ಆರ್ಥಿಕ ಸಂಪನ್ಮೂಲದ ಕ್ರೂಡೀಕರಣ ಅವಶ್ಯವಾಗಿದೆ.
ಈ ನಿಟ್ಟಿನಲ್ಲಿ ಈ ಹಿಂದೆಯೇ ನಮ್ಮ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಸರಾಂತ ಧುರೀಣ ಸನ್ಮಾನ್ಯ ಎಂ ಎನ್ ರಾಜೇಂದ್ರ ಕುಮಾರ್ ಅವರು ಒಕ್ಕೂಟದ ಮೂಲಕ ಆಶ್ರಯ ಬಯಸಿ ಎಲ್ಲ ಜಾತಿ ವರ್ಗದ ಸಮಾಜ ಬಾಂಧವರು ಬರುವುದನ್ನು ಅರಿತು ಆರ್ಥಿಕವಾಗಿ ಹಿಂದುಳಿದ 5 ಕುಟುಂಬಗಳಿಗೆ ಮನೆಯನ್ನು ಕಟ್ಟಿಸಿಕೊಡುವ ಭರವಸೆ ಹಾಗೂ ಈ ಹಿಂದೆಯೇ ರೂ.500000 ಮೊತ್ತವನ್ನು ದಾನ ರೂಪವಾಗಿ ಒಕ್ಕೂಟಕ್ಕೆ ನೀಡಿದ್ದು ಮುಂದಕ್ಕೆ ಪ್ರತಿವರ್ಷ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ನಮ್ಮ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಘೋಷಣೆಯನ್ನು ಮಾಡಿದ್ದಾರೆ.
ಇವರಿಗೆ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು, ಇಂದ್ರಾಳಿ ಜಯಕರ ಶೆಟ್ಟಿ ಕಾರ್ಯದರ್ಶಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕೋಶಾಧಿಕಾರಿ ಸಂಕಬೈಲು ಸತೀಶ ಆಡಪ್ಪ ಜೊತೆ ಕಾರ್ಯದರ್ಶಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.