ಮಂಗಳೂರು: ಪ್ರಖ್ಯಾತ ಪರಿಸರವಾದಿ ಹಾಗು 2019ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ಸೂರು ಕಟ್ಟಿಕೊಳ್ಳಲು ಎಂ.ಆರ್.ಜಿ. ಗುಂಪಿನಿಂದ 5 ಲಕ್ಷ ರೂಪಾಯಿಗಳ ನೆರವನ್ನು ನೀಡಲಾಗಿದೆ.
ಸಾಲು ಮರದ ತಿಮ್ಮಕ್ಕ ಅವರ ವೃಕ್ಷ ಪ್ರೇಮ, ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡುವಲ್ಲಿ ತೋರುವ ಅರ್ಪಣಾಭಾವಕ್ಕೆ ಪರ್ಯಾಯವಾದ ಹೋಲಿಕೆ ಇಲ್ಲ. ಅವರಿಗೆ ಈ ನೆರವನ್ನು ಅತ್ಯಂತ ಗೌರವದಿಂದ ಕೊಡಮಾಡಲಾಗಿದೆ ಎಂದು ಎಂ.ಆರ್.ಜಿ. ಗುಂಪಿನ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ ಶೆಟ್ಟಿ ಹೇಳಿದ್ದಾರೆ. ನೆರವಿನ ಚೆಕ್ ಅನ್ನು ಅವರು ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರಿಸಿದರು.
ಯಾವುದೇ ಔಪಚಾರಿಕ ಶಿಕ್ಷಣ ಇಲ್ಲದೆಯೂ ತನ್ನ ಪರಿಸರ ರಕ್ಷಣೆಯ ಕೆಲಸಗಳಿಂದ ಸಾಲು ಮರದ ತಿಮ್ಮಕ್ಕ ಅವರು ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ ಎಂಬುದನ್ನಿಲ್ಲಿ ಸ್ಮರಿಸಬಹುದು.