ಮಂಗಳೂರು: ಮಂಗಳೂರು ಕೊಡಿಕಲ್ ಬ್ರಹ್ಮ ಸ್ಥಾನ ನಿವಾಸಿ ಗೀತಾ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಳುತ್ತಿದ್ದು , ವೈದ್ಯಕೀಯ ಚಿಕಿತ್ಸೆಗಾಗಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿ ಇದು ಸಾಲದೆ ಕೈಸಾಲವನ್ನು ಮಾಡಿರುತ್ತಾರೆ, ಪತಿ ಸರಿಯಾದ ಆದಾಯವಿಲ್ಲದೆ ಸಮಸ್ಯೆಗೊಳಗಾಗಿದ್ದಾರೆ, ಮಗ ಮತ್ತು ಮಗಳು ಕಾಲೇಜು ಶುಲ್ಕವನ್ನು ಭರಿಸಲಾಗದೆ ಸಮಸ್ಯೆಗೊಳಗಾಗಿದ್ದು , ಇನೇನು ಅತ್ಮಹತ್ಯೆಗೆ ಮುಂದಾದಾಗ ನೆರೆಯ ಗೀತಾ ಭಟ್ ಮತ್ತು ಲೀಲಾ ಭಟ್ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿಯನ್ನು ಪರಿಶೀಲಿಸಿ ಕೂಡಲೇ ಸ್ಪಂದಿಸಿದ ಐಕಳ ಹರೀಶ್ ಶೆಟ್ಟಿ ಹಾಗೂ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಒಕ್ಕೂಟದ ಪದಾಧಿಕಾರಿಯೊಂದಿಗೆ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತು ಕೂಡಲೇ ಸಂಘದ ವತಿಯಿಂದ ರೂಪಾಯಿ 2.65 ಲಕ್ಷ ನೀಡಿದ್ದು. ವೈದ್ಯಕೀಯ ಚಿಕಿತ್ಸೆಗಾಗಿ ಮಾಸಿಕ ಹಣವನ್ನು ನೀಡಲು ಮುಂದಾಗಿದ್ದಾರೆ.
ಈ ಬಡ ಕುಟುಂದ ಉಳಿವಿಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳ ಸದಾಶಿವ ಶೆಟ್ಟಿ ಹೆರಂಬ ಇಂಡಸ್ಟೀಟ್, ತೋನ್ಸೆ ಆನಂದ ಶೆಟ್ಟಿ ಅರ್ಗನಿಕ್ ಇಂಡಸ್ಟೀಟ್, ರತ್ನಾಕರ ಶೆಟ್ಟಿ ಮುಂಡ್ಕೂರು, ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ ಮುಂಬೈ, ಉಳ್ತೂರು ಮೊಹನ್ ದಾಸ್ ಶೆಟ್ಟಿ, ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ಮುಂದಾಗಿದ್ದಾರೆ.