ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ)ದ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಅಕ್ಟೊಬರ್ 22ರಂದು ಫಲಾನುಭವಿಗಳಿಗೆ ಆರ್ಥಿಕ ಧನಸಹಾಯದ ಚೆಕ್ ವಿತರಣಾ ಕಾರ್ಯಕ್ರಮವು ಒಕ್ಕೂಟದ ಆಡಳಿತ ಕಚೇರಿಯಲ್ಲಿ ನಡೆಯಿತು.
ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ವಸತಿ ಯೋಜನೆಗೆ ಶ್ರೀಮತಿ ಜಯಂತಿ ಶೆಟ್ಟಿ ಕೋಟೆಕಾರ್, ಶ್ರೀಮತಿ ಮೀನಾಕ್ಷಿ ಸೋಮೇಶ್ವರ ಹಾಗೂ ಹೆಣ್ಣುಮಕ್ಕಳ ಮದುವೆಗೆ ಕುಮಾರಿ ರಶ್ಮಿ ಶೆಟ್ಟಿ ಹಣೆಹಳ್ಳಿ ಉಡುಪಿ, ಕುಮಾರಿ ಅಂಜನಾ ಶೆಟ್ಟಿ ಕಾಸರಗೋಡು, ಕುಮಾರಿ ಪ್ರೀತಿ ರೈ ಕಾಸರಗೋಡು, ಕುಮಾರಿ ಧೀಕ್ಷಾ ಶೆಟ್ಟಿ ಕಾಸರಗೋಡು, ಕುಮಾರಿ ಸುಗಂಧಿ ಶೆಟ್ಟಿ ಕೊಣಾಜೆ, ಕುಮಾರಿ ನಿಕ್ಷಿತಾ ಶೆಟ್ಟಿ ಬೆಳ್ತಂಗಡಿ, ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರಖ್ಯಾತ್ ಗಣೇಶ್ ಶೆಟ್ಟಿ ಮೂಲ್ಕಿ, ನಿಹಾಲ್ ಶೆಟ್ಟಿ ಮಂಗಳೂರು, ಕಿರಣಚಂದ್ರ ರೈ ಪುತ್ತೂರು, ಕುಮಾರಿ ತನ್ವಿತಾ ಶೆಟ್ಟಿ ಉಳಿಪಾಡಿ ಮಂಗಳೂರು, ಕುಮಾರಿ ಶ್ರಾವ್ಯ ಶೆಟ್ಟಿ ಕಾರ್ಕಳ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಯತೀಶ್ ಶೆಟ್ಟಿ ಕಾಸರಗೋಡು, ಶ್ರೀಮತಿ ಜ್ಯೋತಿ ರೈ ಬಂಟ್ವಾಳ, ಮಾಸ್ಟರ್ ಕವನ್ ಉದಯ್ ಶೆಟ್ಟಿ ಪುಣೆ ಇವರಿಗೆ ಸಹಾಯಧನ ಮಂಜೂರು ಮಾಡಿದ ಚೆಕ್‍ಗಳನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ವಿತರಿಸಿದರು.
ಈ ಸಂದರ್ಭ ಮೋಹನ್ ರೈ ಕಾರ್ಯದರ್ಶಿ ಕಾಸರಗೋಡು ಜಿಲ್ಲಾ ಬಂಟ್ಸ್ ಸಂಘ, ಒಕ್ಕೂಟದ ಆಹ್ವಾನಿತ ಸದಸ್ಯರಾದ ಕಾರ್ತಿಕ್ ಶೆಟ್ಟಿ, ಶ್ರೀಶಾ ಶೆಟ್ಟಿ ಬಂಟ್ಸ್ ಸಂಘ ಮೂಲ್ಕಿ, ಪ್ರವೀಣ್ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿವರ್ಗದವರು, ಹಾಗೂ ಪಲಾನುಭವಿಯ ಕುಟುಂಬಸ್ಥರು ಉಪಸ್ಥಿತರಿದ್ದರು.