ಅ.3ಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ 21 ನೇ ವಾರ್ಷಿಕ ಮಹಾಸಭೆಯು ಅಕ್ಟೋಬರ್ 10ರಂದು ಭಾನುವಾರ 11 ಗಂಟೆಗೆ ಸಂಘದ ಸಭಾಭವನದಲ್ಲಿ ಜರಗಲಿದೆ.
ಬೆಳಿಗ್ಗೆ 8ಕ್ಕೆ ಗಣಹೋಮ, 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 11ಕ್ಕೆ ಮಹಾಸಭೆ, 12.30ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಸಹಭೋಜನ, ಅಪರಾಹ್ನ 1.30ಕ್ಕೆ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 3ರಂದು ಭಾನುವಾರ ಬೆಳಿಗ್ಗೆ 9.30 ಗಂಟೆಗೆ ನೂತನ ನಿರ್ದೇಶಕರ ಸಭೆ ಜರಗಲಿದ್ದು, 2021-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ನಿರ್ದೇಶಕರು ಕ್ಲಪ್ತ ಸಮಯಕ್ಕೆ ಸಭೆಗೆ ಹಾಜರಾಗುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ತಿಳಿಸಿದ್ದಾರೆ.