ಮುಲ್ಕಿ: ಕಿಲ್ಪಾಡಿಯ ಕುಬೆವೂರು ಜಾರಂದಾಯ ದೈವಸ್ಥಾನದ ಬಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯದಿಂದ, ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿರುವ ವಿಕಲಚೇತನ ಕುಟುಂಬವೊಂದಕ್ಕೆ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಭೇಟಿ ನೀಡಿದರು.
ಕುಬೆವೂರಿನ ದೊಡ್ಡಣ್ಣ ಮತ್ತು ಶಕುಂತಲಾ ಶೆಟ್ಟಿ ಯವರು ತೀವೃ ಕುಟುಂಬ ತೀವ್ರ ಬಡತನದಲ್ಲಿದ್ದು ಮಾತ್ರವಲ್ಲದೆ ಮೂರು ಹೆಣ್ಣು ಮಕ್ಕಳು ಬುದ್ದಿ ಮಾಂದ್ಯರಾಗಿದ್ದು ಜೀವನ ಸಾಗಿಸುವುದೇ ಕಷ್ಟದಾಯಕವಾಗಿದ್ದು ಜಾಗತಿಕ ಬಂಟರ ಸಂಘದ ವತಿಯಿಂದ ಪ್ರತೀ ತಿಂಗಳು ಈ ಕುಟುಂಬಕ್ಕೆ ಸಹಾಯ ಹಸ್ತ ನೀಡುವ ಭರವಸೆ ನೀಡಿದರು.
ಈ ಸಂದರ್ಭ ಇಂಜಿನಿಯರ್ ಜೀವನ್ ಶೆಟ್ಟಿ ಕಾರ್ನಾಡ್, ಯೋಗಗುರು ಜಯ ಮುದ್ದು ಶೆಟ್ಟಿ, ಸುಂದರ್ ಶೆಟ್ಟಿ ಕುಬೆವೂರು, ಮುರಳಿಧರ ಭಂಡಾರಿ, ನಾರಾಯಣ ರೈ, ಗಣೇಶ್ ಮುದ್ದು ಶೆಟ್ಟಿ, ರಮೇಶ್ ಶೆಟ್ಟಿ ಮತ್ತಿತರರು ಇದ್ದರು.