ಬಸ್ರೂರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್‍ಕಲ್ ಪತ್ತೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಸ್ರೂರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್‍ಕಲ್ ಪತ್ತೆ

Share This

ಕುಂದಾಪುರ : ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಪ್ರಖ್ಯಾತ ಚಾರಿತ್ರಿಕ ಬಂದರು ನಗರ ಬಸ್ರೂರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ, ಹೆಸರಾದ ಪಟ್ಟಣ ಬಸ್ರೂರು ಎಂದು ಇಂದಿಗೂ ಜನಪ್ರಿಯವಾಗಿದೆ. ಮಧ್ಯಯುಗೀನ ಕರ್ನಾಟಕದ ವಾಣಿಜ್ಯ ಮತ್ತು ಸಾಂಸ್ಕøತಿಕ ಮಹತ್ವದ ನಗರಿ, ನೂರಾರು ಶಾಸನಗಳು, ದೇವಾಲಯಗಳು ಮತ್ತು ದೈವಸ್ಥಾನಗಳ ನೆಲೆವೀಡು.

ಮಾರಿಹಬ್ಬ ದಕ್ಷಿಣ ಭಾರತದ ಜನಪ್ರಿಯ ಶಾಕ್ತ ಸಂಪ್ರದಾಯದ ಆಚರಣೆ. ದಕ್ಷಿಣ ಭಾರತದ ಎಲ್ಲಡೆ ವರ್ಷಕ್ಕೊಮ್ಮೆ, ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಹಬ್ಬ ಜನಪದರ ಹಬ್ಬವಾಗಿ ವೈಭವದಿಂದ ಆಚರಿಸಲ್ಪಡುತ್ತಿದೆ. ಆದರೆ, ಇಡೀ ದೇಶದಲ್ಲಿಯೇ ಕೇವಲ 60 ವರ್ಷಗಳಿಗೆ ಒಮ್ಮೆ ಆಚರಿಸಲ್ಪಡುವ ದೇವಿ ಹಬ್ಬ ಅಥವಾ ಮಾರಿ ಹಬ್ಬ, ನಡೆಯುವುದು ಬಸ್ರೂರಿನಲ್ಲಿ ಮಾತ್ರ. ಇಂತಹ ಹತ್ತು ಹಲವು ವೈಶಿಷ್ಯಗಳ ತವರೂರಾದ ಬಸ್ರೂರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್ಕಲ್ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರೊ. ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕರಾವಳಿಯ ವಿಶಿಷ್ಟ ನಿಲ್ಸ್ಕಲ್: ಉಡುಪಿ ಜಿಲ್ಲೆಯ ಸುಭಾಷ್ ನಗರ, ಅಡ್ಕದಕಟ್ಟೆ ಮತ್ತು ಕೊಲ್ಲೂರುಗಳಲ್ಲಿ ಈಗಾಗಲೇ ನಿಲ್ಸ್ಕಲ್ಗಳು ಪತ್ತೆಯಾಗಿವೆ. ಆದರೆ, ಬಸ್ರೂರಿನ ನಿಲ್ಸ್ಕಲ್ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಕಣ್ಮನ ಸೆಳೆಯುತ್ತದೆ. ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ನಿಲ್ಸ್ಕಲ್ನ್ನು ವಿನ್ಯಾಸಗೊಳಿಸಲಾಗಿದೆ. ಕರಾವಳಿಯ ನಿಲ್ಸ್ಕಲ್ಗಳನ್ನು ಸ್ಥಳೀಯ ದಂಥಕತೆಗಳಲ್ಲಿ ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ. ಆದರೆ, ಬಗ್ಗೆ ಯಾವುದೇ ಖಚಿತ ಪುರಾತತ್ವ ಆಧಾರಗಳು ಲಭ್ಯವಿಲ್ಲ.


ನಿಲ್ಸ್ಕಲ್ ಎಂದರೆ ಏನು?: ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿ ನಿಂತತೆ ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿಗಳ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಿರುವ ಒರಟಾದ ಬೃಹತ್ ಶಿಲೆಗಳನ್ನು ನಿಂತಿಕಲ್ಲು, ನಿಲ್ಸ್ಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಮುಂತಾದ ಹೆಸರುಗಳಿಂದ ಸ್ಥಳೀಯ ಜನರು ಇವುಗಳನ್ನು ಗುರುತಿಸುತ್ತಾರೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.


ಬಸ್ರೂರಿನ ನಿಲ್ಸ್ಕಲ್: ಬಸ್ಸೂರಿನ ನಿಲ್ಸ್ಕಲ್ ಸುಮಾರು ಏಳು ಅಡಿ ಎತ್ತರವಿದೆ. ವಾಯುವ್ಯ ದಿಕ್ಕಿಗೆ ಮುಖ ಮಾಡಿ ನಿಂತಿರುವ ಕಲ್ಲು, ಪೂರ್ವಕ್ಕೆ ಸ್ವಲ್ಪ ವಾಲಿದಂತೆ ನಿಲ್ಲಿಸಲ್ಪಟ್ಟಿದೆ. ಬಸ್ರೂರನ್ನು ಶಾಸನಗಳಲ್ಲಿ ಬಸುರೆಪಟ್ಟಣ, ಬಸುರೆನಗರ, ಬಸ್ರೂರು, ವಸುಪುರ ಎಂದು ಕರೆಯಲಾಗಿದೆ. ಕನ್ನಡ ಭಾಷೆಯಲ್ಲಿ ಬಸಿರು, ಬಸುರೆ ಎಂದರೆ ಗರ್ಭಿಣಿ ಎಂದೇ ಅರ್ಥವಿದೆ. ವಸುಪುರ ಎಂಬ ಸಂಸ್ಕø ಪದದಲ್ಲಿನ ವಸು ಎಂಬ ಅರ್ಥವೂ ಭೂಮಿ ಎಂದೇ ಅರ್ಥ. ಭೂಮಿ ಎಂದರೆ ಹೆಣ್ಣೆ ತಾನೇ? ಆದ್ದರಿಂದ ಬಸ್ರೂರಿನ ನಿಲ್ಸ್ಕಲ್ ಗೂ ಹೆಣ್ಣಿಗೂ ನಿಕಟ ಸಂಬಂಧವಿದೆ. ಬಸ್ರೂರಿನ ವಿಶಿಷ್ಟ ನಿಲ್ಸ್ಕಲ್ ಸಂಶೋಧನೆ, ಬಸ್ರೂರಿನ ಪ್ರಾಚೀನತೆಯನ್ನು ಕನಿಷ್ಠ ಕ್ರಿ.ಪೂ. 1000 ವರ್ಷಗಳ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತದೆ. ನಿಲ್ಸ್ಕಲ್ಲು ಬಸ್ರೂರಿನ ವೆಂಕಟರಮಣ ದೇವಾಲಯ ಮತ್ತು ಕೋಟೆ ಆಂಜನೇಯ ದೇವಾಲಯಗಳ ನಡುವಿನಲ್ಲಿದೆ.


ಕಲ್ಲಿನ ಬಗ್ಗೆ ನನ್ನ ಗಮನ ಸೆಳೆದ ಮುರುಳೀಧರ ಹೆಗಡೆ, ಅಧ್ಯಯನದಲ್ಲಿ ಸಹಕರಿಸಿದ ಬಸ್ರೂರಿನ ಪ್ರದೀಪ್, ನನ್ನ ವಿದ್ಯಾರ್ಥಿಗಳಾದ ಶ್ರೇಯಸ್, ನಾಗರಾಜ್, ಗೌತಮ್, ಚಂದ್ರು ಮತ್ತು ಕಾರ್ತಿಕ್ ಹಾಗೂ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯವರಿಗೆ ನಾನು ಆಭಾರಿಯಾಗಿದ್ದೇನೆ.

Pages