ಪಟ್ಲ ಕಲಾವಿದರ ಕಾಮಧೇನು - ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಟ್ಲ ಕಲಾವಿದರ ಕಾಮಧೇನು - ಐಕಳ ಹರೀಶ್ ಶೆಟ್ಟಿ

Share This
ಮಂಗಳೂರು : ಕೊರೊನಾ ಲಾಕ್ ಡೌನ್ ನಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ವಾರ್ಷಿಕ ಸಭೆಯು ನಗರದ ಜನತಾ ಡಿಲಕ್ಸ್ ಹೋಟೇಲಿನಲ್ಲಿ ಜರಗಿತು.
ಸಭೆಗೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಸ್ವತ: ಕಲಾವಿದನಾಗಿದ್ದು ತನ್ನ ಸಹಧ್ಯೋಗಿ ಕಲಾವಿದರ ನೋವಿಗೆ ಸ್ಪಂದಿಸುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರೆಂದರೆ ಪಟ್ಲ ಸತೀಶ್ ಶೆಟ್ಟಿಯವರು. ಯಕ್ಷಗಾನ ಕ್ಷೇತ್ರದಲ್ಲಿ ಎಳೆಯ ಪ್ರಾಯದಲ್ಲಿ ಮಹತ್ಕಾರ್ಯಗಳ ಮೂಲಕ ಆಪಾರ ಕೀರ್ತಿ ಸಂಪಾದನೆಯ ಜೊತೆಗೆ ಕಲಾವಿದರ ಕಣ್ಣೀರನ್ನು ಒರೆಸಲು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕೇವಲ ಯಕ್ಷಗಾನ ಕಲಾವಿದರಿಗಲ್ಲದೆ ನಾಟಕ ರಂಗದ ಕಲಾವಿದರಿಗೆ, ಧೈವರಾಧನೆಯ ಕಲಾವಿದರಿಗೆ, ಪರಿಚಾರಕರಿಗೆ ಹಾಗೂ ಭರತನಾಟ್ಯ ಕಲಾವಿದರಿಗೆ ಸಹಾಯ ಮಾಡುವ ಮೂಲಕ ಕಲಾವಿದರ ಕಾಮಧೇನು ಆಗಿ ಪ್ರಖ್ಯಾತರಾಗಿದ್ದಾರೆಂದರು.

ಕಳೆದ 6 ತಿಂಗಳಲ್ಲಿ ಫೌಂಡೇಶನಿನ ಸೇವಾ ಕಾರ್ಯದ ಮತ್ತು ಲೆಕ್ಕಪತ್ರದ ವಿವರಗಳನ್ನು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸಭೆಗೆ ಮಂಡಿಸಿದರು.

2021ರ ಲಾಕ್ ಡೌನಿನ ಈ ಆರು ತಿಂಗಳ ಸಂದರ್ಭದಲ್ಲಿ ಯಕ್ಷಗಾನದ, ನಾಟಕದ ,ದೈವಾರಾದನೆಯ ಹಾಗೂ ಭರತನಾಟ್ಯದ ಸುಮಾರು 2100 ಕಲಾವಿದರಿಗೆ ಅಂದಾಜು ರೂ 30-00 ಲಕ್ಷ ಮೌಲ್ಯದ ಅಕ್ಕಿ ದಿನಸಿ ಸಾಮಾಗ್ರಿಗಳ ವಿತರಣೆ, 18 ಮಂದಿ ಯಕ್ಷಗಾನ ಕಲಾವಿದರ ಮನೆ ರಿಪೇರಿ ಮತ್ತು ವೈದ್ಯಕೀಯ ನೆರವು ರೂ 8-75 ಲಕ್ಷ, ಇನ್ಸೂರೆನ್ಸ್ ಕಂಪೆನಿಗೆ  914 ಮಂದಿ ಯಕ್ಷಗಾನ ಕಲಾವಿದರಿಗೆ ಅಪಘಾತ ವಿಮೆಯಾಗಿ ರೂ 11.15 ಲಕ್ಷ ಮತ್ತು ಯೂಟ್ಯೂಬ್ ಮೂಲಕ ಆನ್ ಲೈನ್ ನೇರ ಪ್ರಸಾರ ಯಕ್ಷಗಾನ ಪ್ರದರ್ಶನ, ತಾಳಮದ್ದಲೆ ಕಾರ್ಯಕ್ರಮಗಳನ್ನು ಜರಗಿಸಲಾಗಿದೆಯೆಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು, ಸೇವಾ ಕಾರ್ಯಗಳನ್ನು ಕಲಾಮಾತೆಯ, ಕಲಾಪೋಷಕರ ಹಾಗೂ ಕಲಾಭಿಮಾನಿಗಳ ಆಶೀರ್ವಾದ ಮತ್ತು ಸಹಕಾರದಿಂದ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ವಿವಿಧ ಘಟಕದಿಂದ ಆಗಮಿಸಿದ್ದ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು.

ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕ್ಷೇತ್ರದ ಹಲವಾರು ದಿಗ್ಗಜರು ನಮ್ಮನ್ನಗಲಿದ್ದು ಅವರೆಲ್ಲರಿಗೂ ನುಡಿ ನಮನಗಳನ್ನು ಯಕ್ಷಗಾನ ವಿದ್ವಾಂಸರಾದ ಫ್ರೋ.ಎಂ ಪ್ರಭಾಕರ  ಜೋಷಿಯವರು ಅರ್ಪಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷರಾದ ಶ್ರೀ ಭುಜಬಲಿ  ಧರ್ಮಸ್ಥಳ ಇವರು ಯಕ್ಷಗಾನದ ಕಲಾವಿದರಿಗೆ ಆಸರೆಯಾಗಿರುವ ಪಟ್ಲ ಫೌಂಡೇಶನಿಗೆ ಮತ್ತು ಸತೀಶ್ ಶೆಟ್ಟಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲೆಂದು ಹರಸಿದರು.

ಯಕ್ಷಗಾನ ರಂಗದ ಪ್ರಸಿದ್ಧ ವೇಷಧಾರಿಗಳಾದ ಸರಪಾಡಿ ಅಶೋಕ್ ಶೆಟ್ಟಿ ಮತ್ತು ಶ್ರೀಮತಿ ಪೂರ್ಣಿಮ ಯತೀಶ್ ರೈಯವರು ಫೌಂಡೇಶನ್ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಫೌಂಡೇಶನಿನ ಸದಸ್ಯರಾದ ಕುಮಾರಿ ಬಿಂದಿಯಾ ಶೆಟ್ಟಿ , ಜಗನ್ನಾಥ ಶೆಟ್ಟಿ ಬಾಳ , ಜಯಶೀಲ ಅಡ್ಯಂತಾಯ , ರವಿ ಶೆಟ್ಟಿ ಅಶೋಕನಗರ ಮತ್ತು ಪುರುಷೋತ್ತಮ ಭಂಡಾರಿ ಅಡ್ಯಾರ್ ಇವರುಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. 

ವೇದಿಕೆಯಲ್ಲಿ ಫೌಂಡೇಶನಿನ ಪದಾಧಿಕಾರಿಗಳಾದ ಡಾ! ಮನು ರಾವ್,ಸುದೇಶ್ ಕುಮಾರ್ ರೈ, ದುರ್ಗಾಪ್ರಸಾದ್ ಪಡುಬಿದ್ರಿ, ಶ್ರೀಮತಿ ಆರತಿ ಆಳ್ವ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಶ್ರೀ ಶೇಖಬ್ಬ ಇವರು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಬಗ್ಗೆ ಗೌರವಿಸಲಾಯಿತು.

ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಧನ್ಯವಾದ ಸಮರ್ಪಿಸಿದರು.

Pages