ಮಲಾಡ್ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಚೆಸ್ ಮತ್ತು ಕೇರಮ್ ಟೂರ್ನಮೆಂಟ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಲಾಡ್ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಚೆಸ್ ಮತ್ತು ಕೇರಮ್ ಟೂರ್ನಮೆಂಟ್

Share This
ಮುಂಬೈ : ಮಲಾಡ್ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಚೆಸ್ ಮತ್ತು ಕೇರಮ್ ಟೂರ್ನಮೆಂಟನ್ನು ಅ.10ನೇ ರವಿವಾರ ಮಧ್ಯಾಹ್ನ ಸಂಘದ ಅಧ್ಯಕ್ಷರಾದ ಎಡ್ವೋಕೇಟ್ ಜಗದೀಶ್ ಎಸ್. ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಲಾಡ್ (ಪಶ್ಚಿಮ) ಮಾಲ್ವಾನಿ ಫಾಯರ್ ಬ್ರಿಗೇಡಿನ ಎದುರು, ಮಾರ್ವೆ ರೋಡ್, ರಾಧಾಕೃಷ್ಣ ಹೋಟೆಲ್‌ನ ಹತ್ತಿರ, ಯುನಿಟಿ ಅಪಾರ್ಟ್ಮೆಂಟ್ನ ಸಂಘದ ಕಚೇರಿಯ ರಮಾನಾಥ ಎಸ್. ಪಯ್ಯಡೆ ಸ್ಮಾರಕ ಸಭಾಗೃಹ ದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಅಡ್ವಕೇಟ್ ಜಗದೀಶ್ ಹೆಗ್ಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದು ಯುವ ವಿಭಾಗ ಪದಾಧಿಕಾರಿಗಳು ಯುವ ಸಮುದಾಯ ಸಂಘಟಿತ ಆಗಬೇಕು. ಸಂಘದ ಸೇವಾಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಹಿಂದಿನಿಂದಲೇ ನಡೆದುಕೊಂಡು ಬಂದಿರುವ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಎಲ್ಲರೂ ನಮ್ಮವರೇ ಕ್ರೀಡೆಯಲ್ಲಿ ಯಾವುದೇ ಮನಸ್ತಾಪ ಬಾರದಂತೆ ನಾವು ಪಾಲುಗೊಳ್ಳಬೇಕು ಸಂಘದ ಮುಂದಿನ ಬಹಳಷ್ಟು ಕಾರ್ಯಕ್ರಮಗಳ ನಡೆಯಲಿದೆ ಅದಕ್ಕೆ ತಾವೆಲ್ಲರು ಸಹಕಾರ ನೀಡಬೇಕು. ಸದಸ್ಯರ ಬೆಂಬಲವೇ ಸಂಘದ ಆಧಾರಸ್ತಂಭ ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ Infiniti Digitech Pvt Ltd ನಿರ್ದೇಶಕ ಸುರೇಶ್ ಕರ್ಕೇರ ಮಾತನಾಡುತ್ತಾ ನಮ್ಮೊಳಗಿದ್ದ ಕ್ರೀಡಾ ಸ್ಪೂರ್ತಿಗೆ ಇದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ ನಮ್ಮ ಕ್ರೀಡಾ ಸ್ಪೂರ್ತಿಯನ್ನು ಪ್ರದರ್ಶಿಸುವುದು ಅಗತ್ಯವಿದೆ. ಸಂಘದ ಮೂಲಕ ಇನ್ನಷ್ಟು ಉತ್ತಮ ಸೇವಾ ಕಾರ್ಯಗಳು ಜನಸಾಮಾನ್ಯರಿಗೆ ತಲುಪಲಿ ಎಂದು ನುಡಿದರು. 

ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕೆ ಪೂಜಾರಿ ಮಾತನಾಡುತ್ತಾ ಕ್ರೀಡೆಯಲ್ಲಿ ಸೋಲು ಗೆಲುವು ಸ್ವಾಭಾವಿಕ. ಸೋತವರು ಮತ್ತೆ ಮತ್ತೆ ಗೆಲ್ಲಬೇಕೆನ್ನುವ ಸಾಧನೆಯಲ್ಲಿ ಇರುತ್ತಾನೆ. ಗೆದ್ದವ ಸಂತೋಷದಲ್ಲಿ ಇರುತ್ತಾನೆ ಅವು ನಿರಂತರ ಗೆಲುವಿನತ್ತ ಪ್ರಯತ್ನ ಮಾಡಬೇಕು ಇದು ಕುಟುಂಬ ಕ್ರೀಡೆಯಾಗಿದೆ ನಮ್ಮವರ ಪ್ರತಿಭೆಗೆ ಅವಕಾಶ ಉದ್ದೇಶ ಮಾತ್ರವಾಗಿದೆ. ಈ ವರ್ಷ ನಮ್ಮ ಸಂಘದ ಅಧ್ಯಕ್ಷರ ಹೊಸ ಕಲ್ಪನೆಯಲ್ಲಿ 'ಚೆನ್ನ ಮನೆ' ಆಯೋಜಿಸಿಕೊಂಡು ಕೊಂಡಿದ್ದೇವೆ ಎಂದು ನುಡಿದರು. 

ವೇದಿಕೆಯಲ್ಲಿ. ಗೌ ಪ್ರ. ಕಾರ್ಯದರ್ಶಿ ಶಂಕರ್ ಡಿ. ಪೂಜಾರಿ, ಗೌ. ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ ಜೊತೆ ಕಾರ್ಯದರ್ಶಿ ಅನಿಲ್ ಪೂಜಾರಿ ಜೊತೆ ಕೋಶಧಿಕಾರಿ ಶಂಕರ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ ಮತ್ತು ಕಾರ್ಯದರ್ಶಿ ಸುಂದರ ಪೂಜಾರಿ ವಾಲ್ಪಾಡಿ ಮತ್ತು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಮತ್ತು ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ
ಶಂಕರ್ ಡಿ. ಪೂಜಾರಿ ನಿರೂಪಿಸಿ ವಂದಿಸಿದರು.

Pages