ಉಡುಪಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕರ ಸದಸ್ಯರಾದ ಶ್ರೀಮತಿ ಮನೋರಮ ಎನ್. ಬಿ. ಶೆಟ್ಟಿ ತ್ರಿವೇಣಿ ಗ್ರೂಪ್ ಆಫ್ ಕಂಪನಿಸ್ ಮುಂಬೈ ಇವರ ಶಿಫಾರಸಿನ ಮೇರೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಸೂಚನೆಯಂತೆ, ಉಡುಪಿಯ ಕುದಿ ಗ್ರಾಮದ ಶ್ರೀಮತಿ ಸುಗಂಧಿ ಶೆಟ್ಟಿ ಅವರ ಮನೆ ನಿರ್ಮಾಣಕ್ಕೆ ಮಂಜೂರಾದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿಯವರು ಹಸ್ತಾoತರಿಸಿದರು.



ಈ ಸಂದರ್ಭ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ್ ಶೆಟ್ಟಿ ಬಂಟ್ಸ್ ಸಂಘ ಉಡುಪಿ ಹಾಗೂ ಪಲಾನುಭವಿಯ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.