ಉಡುಪಿ : ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಮದುವೆ ಆಭರಣಗಳನ್ನು ಪೊಲೀಸರಿಗೆ ನೀಡಿ ಅದರ ವಾರೀಸುದಾರರ ಪತ್ತೆಹಚ್ಚಿ ಒಪ್ಪಿಸಿದ ಕುಂದಾಪುರದ ಪ್ರತಾಪ್ ಶೆಟ್ಟಿ ಹಾಗೂ ವಿಟ್ಲದ ಗೋಪಾಲ್ ಶೆಟ್ಟಿ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಕುಂದಾಪುರ - ಮಂಗಳೂರು ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮದುವೆಗೆ ಮಾಡಿಸಿದ್ದ ಹೊಸ ಆಭರಣಗಳ ಬ್ಯಾಗ್ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ಈ ಸಂದರ್ಭ ಬಸ್ಸಿನ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತಾಪ್ ಶೆಟ್ಟಿ ಹಾಗೂ ಗೋಪಾಲ್ ಶೆಟ್ಟಿ ಅವರು ತಕ್ಷಣ ಆಭರಣದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿ ವಾರೀಸುದಾರರಿಗೆ ಒಪ್ಪಿಸುವಂತೆ ಮಾಡಿದ್ದಾರೆ. ಇವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.