ಹಿರಿಯ ಪತ್ರಕರ್ತ ವಿದ್ಯಾಧರ ಶೆಟ್ಟಿ ಅವರಿಗೆ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯ ಪತ್ರಕರ್ತ ವಿದ್ಯಾಧರ ಶೆಟ್ಟಿ ಅವರಿಗೆ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Share This
ಮಂಗಳೂರು : ಹಿರಿಯ ಪತ್ರಕರ್ತ ವಿದ್ಯಾಧರ ಶೆಟ್ಟಿ ಅವರು ಈ ಭಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅವರ ವಿವರ : ವಿದ್ಯಾರ್ಹತೆ - ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪತ್ರಿಕೋದ್ಯಮದಲ್ಲಿ ಅನುಭವ: 1988ರಲ್ಲಿ ಕಲಾ ಕಿರಣ ಮೂಲಕ ಪಾದಾರ್ಪಣೆ, 1 ವರ್ಷ ಸೇವೆ, ಮಂಗಳೂರು ಮಿತ್ರ: 1989-92, ಹೊಸ ಸಂಜೆ: 1992-99, ಕರಾವಳಿ ಮಾರುತ: 2000-03, 2000ರಲ್ಲಿ ಪೊಸಕುರಲ್ ವಾಹಿನಿ ಆರಂಭ, 19 ವರ್ಷಗಳಿಂದ ಕಲೆ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾರ್ವಜನಿಕ ಕಾರ್ಯಕ್ರಮಗಳ ಪ್ರಸಾರದಲ್ಲಿ ಖ್ಯಾತಿ. ಹಲವು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರವಾಗಿದೆ.
 
ಹವ್ಯಾಸ: ಯಕ್ಷಗಾನ ಕಲಾವಿದ, ತಾಳ ಮದ್ದಳೆ ಅರ್ಥಧಾರಿ, ನಾಟಕ ಕಲಾವಿದ, ಕಾರ್ಯಕ್ರಮ ನಿರೂಪಕ, ಹಾಗೂ ಉತ್ತಮ ಸಂಘಟಕರಾಗಿದ್ದಾರೆ. ಅವರು ಕಿನ್ಯ ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಸಕ್ರೀಯ ಸದಸ್ಯ, ಪ್ರಧಾನ ಕಾರ್ಯದರ್ಶಿಯಾಗಿ ಯಕ್ಷಗಾನ ಯುವಕ ಮಂಡಲದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಪೊಸಕುರಲ್ ಬಳಗದ ಮೂಲಕ 9 ವರ್ಷಗಳಿಂದ ರಂಜಾನ್, ದೀಪಾವಳಿ, ಕ್ರಿಸ್ಮಸ್ ಸೌಹಾರ್ದ ಕೂಟದ ಮೂಲಕ ಸೌಹಾರ್ದತೆಗೆ ಆದ್ಯತೆ ನೀಡಲಾಗಿದೆ.

ಉಳ್ಳಾಲ ಸದ್ಭಾವನಾ ವೇದಿಕೆಯ ಸದಸ್ಯ, ಮಾದಕ ವ್ಯಸನ ವಿರುದ್ಧ ಜಾಗೃತಿ, ಮತದಾನ ಜಾಗೃತಿ ಕಾರ್ಯಕ್ರಮ. ಕೊರೋನಾ ಜಾಗೃತಿ, ಕೊರೋನಾಸುರ ಯಕ್ಷಗಾನ ಕಾರ್ಯಕ್ರಮ.

ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ ಸಂದರ್ಭದಲ್ಲಿ ನಡೆದ ಸೌಹಾರ್ದ ಸಂಗಮದ ಗೌರವ ಸಲಹೆಗಾರರಾಗಿ ಸೇವೆ ಛೋಟ ಮಂಗಳೂರು ಲಯನ್ಸ್ ಕ್ಲಬ್ ಸಕ್ರೀಯ ಸದಸ್ಯ, ಅಧ್ಯಕ್ಷನಾಗಿ 18 ವರ್ಷಗಳಿಂದ ಸೇವೆ, ಪರಿಸರದ ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಸದಸ್ಯನಾಗಿ, ಗೌರವ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Pages