ಬಂಟ್ಸ್ ನ್ಯೂಸ್, ಮುಂಬೈ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಕಲ್ಯಾಣ ಸೇವೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಯಶಸ್ವಿಯಾಗಿ ನಡೆಸಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವುದನ್ನು ಗಮನಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು ಹಾಗೂ ಆರ್ಗನಿಕ್ ಕೆಮಿಕಲ್ಸ್ ಲಿಮಿಟೆಡ್ ಸಿಎಂಡಿ ಆನಂದ ಶೆಟ್ಟಿ ತೋನ್ಸೆ ಇವರು ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ತನ್ನ ಒಟ್ಟು 50 ಲಕ್ಷ ರೂಪಾಯಿಗಳ ಮೊತ್ತದೊಂದಿಗೆ ನಿಸ್ವಾರ್ಥ ಕೊಡುಗೆಯನ್ನು ನೀಡಿದ್ದಾರೆ.


ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಆನಂದ ಶೆಟ್ಟಿ ಅವರು ತನ್ನ ಹೃದಯಪೂರ್ವಕ ಕೊಡುಗೆಯನ್ನು ನೀಡಿ ಒಕ್ಕೂಟ ಸೇವಾಕಾರ್ಯವನ್ನು ವನ್ನು ಬಲಪಡಿಸಿದ್ದಾರೆ.
ಸೆಪ್ಟಂಬರ್ 5ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಲಿರುವ ಜಾಗತಿಕ ಬಂಟರ ಒಕ್ಕೂಟದ ಬಹಿರಂಗ ಅಧಿವೇಶನ, ಸಾಧಕರ ಸನ್ಮಾನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ್ ಶೆಟ್ಟಿ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ , ಮತ್ತು ರತ್ನಾಕರ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.