ಸುರತ್ಕಲ್ : ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನವು ಮಂಗಳೂರಿನ ಪ್ರಶಾಂತವಾದ ಕುಳಾಯಿ ಕೋಡಿಕೆರೆ (ಮುಡುಬೆಟ್ಟು, ನೇತಾಜಿನಗರ) ಸ್ಥಳದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಸರಿ ಸುಮಾರು 1.5 ಎಕರೆ ಭೂಮಿಯಲ್ಲಿ ದೇವಸ್ಥಾನ ನಿರ್ಮಾಣವಾಗಲಿದ್ದು ಈ ದೇವಾಲಯವು ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳ ಕೇಂದ್ರವಾಗಿ ಮಂಗಳೂರಿನ ಸಮಗ್ರ ಉನ್ನತಿಗೆ ಕೊಡುಗೆ ನೀಡಲಿದೆ.
ಈ ದೇವಸ್ಥಾನದ ಭೂಮಿ ಪೂಜೆಯು ಆ.27ರ ಶುಕ್ರವಾರ
ನೆರವೆರಿದ್ದು ಮಂಗಳೂರು ಉತ್ತರ ಶಾಸಕ ಡಾ.
ವೈ ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಇಸ್ಕಾನ್ ಅರ್ಚಕರು,
ಊರವರು ಹಾಗೂ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.