ಮಂಗಳೂರು : ಇಂದು ಸಂಪತ್ತು ಗಳಿಸಲು ನೂರಾರು ದಾರಿಯಿದೆ. ಆದರೆ ಮಾಡಿದ ಸಂಪತ್ತಿನಲ್ಲಿ ಬಡವರಿಗೆ ದಾನ ಮಾಡೋ ಮನಸ್ಸಿರೋರು ಸಿಗೋದು ತುಂಬಾ ಕಷ್ಟ. ಆದರೆ ಐಕಳ ಹರೀಶ್ ಶೆಟ್ಟಿ ಅವರು ದಾನಿಗಳ ಮೂಲಕ ದಾನ ಸಂಗ್ರಹಿಸಿ ನೊಂದವರಿಗೆ ನೀಡುವ ಮೂಲಕ ನೆರಳಾಗಿದ್ದಾರೆ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.



ಅವರು ಸೆ.23ರಂದು
ಮಾತೃಸಂಘದ ಅಮೃತೋತ್ಸವ ಕಟ್ಟಡದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಹಾಗೂ ಸಾಧಕರಿಗೆ
ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಟಾಟಿಸಿ ಮಾತನಾಡಿದರು. ಇಂದು ದಾನಧರ್ಮ ಮರೆಯಾಗಿದ್ದು
ಭಯೋತ್ಪಾದನೆ ಸಕ್ರಿಯವಾಗಿದೆ. ನಮ್ಮ ಭಗವದ್ಗಿತೆಯಲ್ಲಿ ದಾನ ಧರ್ಮದ ಮಹತ್ವದ ಬಗ್ಗೆ ಉಲ್ಲೇಖವಿದೆ.
ಆದರೆ ಅದನ್ನು ಅನುಸರಿಸೋದು ಕಡಿಮೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಂದು ದಾನಿಗಳ ಮೂಲಕ ದಾನ ಪಡೆದು
ಕಷ್ಟದಲ್ಲಿರುವವರಿಗೆ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಇಂತಹ ಕಾರ್ಯಗಳು ಇನ್ನಷ್ಟು ಹೆಚ್ಚಾಗಲಿ
ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಸಭೆಯನ್ನುದ್ದೇಶಿಸಿ
ಮಾತನಾಡಿದ ಅವರು, ಸಹಾಯಹಸ್ತ ಪಡೆದ ಮಕ್ಕಳು ಕಲಿತು ಜೀವನದಲ್ಲಿ ಉತ್ತಮ ಸ್ಥಾನ ಪಡೆದು ಕುಟುಂಬದ ಜವಾಬ್ದಾರಿ
ತೆಗೆದುಕೊಂಡು ಬೆಳುಗುವಂತಾಗಲಿ. ಮನೆಯಿಲ್ಲದವರಿಗೆ ಆದಷ್ಟೂ ಬೇಗನೆ ಮನೆ ದೊರೆಯಲಿ. ಅನಾರೋಗ್ಯ ಸಮಸ್ಯೆಯಿರುವವರ
ಆರೋಗ್ಯ ಉತ್ತಮವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಉಳ್ಳವರಿಗೆ ಎಲ್ಲರೂ ಇದ್ದಾರೆ, ಆದರೆ
ಎನೂ ಆಸರೆಯಿಲ್ಲದವರಿಗೆ ನಾವು ಸಹಾಯ ಮಾಡಿ ಅವರ ಬಾಳು ಬೆಳಗಬೇಕಾಗಿದೆ. ಇಲ್ಲಿವರೆಗೆ ಲಾಕ್ಡೌನ್ ಸಂದರ್ಭದಲ್ಲೂ
ಸಹಾಯ ಕೇಳಿ ಬಂದವರಿಗೆ ನಾವು ಇಲ್ಲವೆನ್ನದೆ ಕಟೀಲಮ್ಮನ ಅನುಗ್ರಹದಿಂದ ನೀಡಿದ್ದೇವೆ ಮುಂದೆಯು ನೀಡುತ್ತೇವೆ
ಎಂದರು.



ಕಾರ್ಯಕ್ರಮದಲ್ಲಿ ಅಮೃತ ಪ್ರಕಾಶನ ಮಾಸಿಕದ ಮಾಲತಿ ಶೆಟ್ಟಿ ಮಾಣೂರು ಹಾಗೂ ಹಿರಿಯ ಪತ್ರಕರ್ತ ನಿಶಾಂತ್ ಶೆಟ್ಟಿ ಕಿಲೆಂಜೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 12 ಲಕ್ಷ ಮೊತ್ತದ ಶೈಕ್ಷಣಿಕ 6, ವೈದ್ಯಕೀಯ 10, ವಿವಾಹ 3, ಮನೆ ನಿರ್ಮಾಣ ಹಾಗೂ ಮನೆ ರಿಪೇರಿಗೆ 18 ಆರ್ಥಿಕ ನೆರವಿನ ಚೆಕನ್ನು ಅರ್ಹ ಫಲಾನುಭವಿಗಳಿಗೆ ಹಂಚಲಾಯಿತು.
ಕಾರ್ಯಕ್ರಮದಲ್ಲಿ
ಒಕ್ಕೂಟದ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು ಹಾಗೂ
ಒಕ್ಕೂಟದ ಪೋಷಕರಾದ ಮುಂಡ್ಕೂರು ರತ್ನಾಕಾರ ಶೆಟ್ಟಿ, ಲಯನ್ಸ್ ವಸಂತ ಶೆಟ್ಟಿ, ಲಯನ್ಸ್ ವಿಶ್ವನಾಥ ಶೆಟ್ಟಿ,
ನಿರ್ದೇಶಕ ವಿಜಯ್ ಕುಮಾರ್ ಶೆಟ್ಟಿ ಕೊಡಿಯಲ್’ಬೈಲ್, ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜತೆ
ಕಾರ್ಯದರ್ಶಿ ಸಂಕಬೈಲ್
ಸತೀಶ್ ಅಡಪ, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ನಿರ್ದೇಶಕರು,
ಮಹಾ ಪೋಷಕರು, ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಹಾಗೂ
ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್
ಶೆಟ್ಟಿ ಧನ್ಯವಾಧ ಸಮರ್ಪಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥಿಸಿದರು.