ಸೆ.30 ರಂದು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 33ನೇ ವಾರ್ಷಿಕ ಮಹಾಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸೆ.30 ರಂದು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 33ನೇ ವಾರ್ಷಿಕ ಮಹಾಸಭೆ

Share This

ಮುಂಬಯಿ : ಬಂಟರ ಸಂಘ ಮುಂಬಯಿ ಇದರ ಸಂಚಾಲಕತ್ವದಲ್ಲಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 33ನೇ ವಾರ್ಷಿಕ ಮಹಾಸಭೆ ಸೆ. 30ರಂದು ಗುರುವಾರ ಬೆಳಿಗ್ಗೆ 10:00ಕ್ಕೆ ಕುರ್ಲಾ ಪೂರ್ವಾದ ಬಂಟರ ಭವನ ರಾಧಾಬಾಯಿ ಟಿ. ಭಂಡಾರಿ ಸಭಾಗ್ರಹದಲ್ಲಿ ಮಾತೃಭೂಮಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರುರವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.

ಅಂದಿನ ಮಹಾಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಮಾತೃಭೂಮಿಯ ಉಪಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ರಮೇಶ್ . ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ,        ನಿರ್ದೇಶಕರುಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಮಹೇಶ್ ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಡಾ. ಆರ್. ಕೆ. ಶೆಟ್ಟಿ, ಸಂತೋಷ್ ಜವಂದಲೆ, ಮಾತೃಭೂಮಿಯ 19 ಸಲಹಾ ಸಮಿತಿ ಸದಸ್ಯರು, ಮಾಜಿ  ಪದಾಧಿಕಾರಿಗಳು ಹಾಗೂ ಶೇರುದಾರ ಗ್ರಾಹಕರು ಪಾಲ್ಗೊಳ್ಳಲಿರುವರು.


ಮುಂಬಯಿಯ ಆರ್ಥಿಕ ಕೋ ಆಪರೇಟಿವ್ ಸೊಸೈಟಿ ಗಳಲ್ಲಿ ತನ್ನದೇ ಆದ ಸ್ಥಾನ ಮಾನ ದಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುತ್ತಾ ಜನಮನ್ನಣೆ ಗಳಿಸಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಿ, ಅದರ ಅಭ್ಯುದಯಕ್ಕೆ ಕಾರಣರಾದ ಮಾತೃಭೂಮಿಯ ಪ್ರಾರಂಭದಿಂದ ಇಂದಿನವರೆಗಿನ  ಕಾರ್ಯಾಧ್ಯಕ್ಷರುಗಳು, ಆಡಳಿತ ನಿರ್ದೇಶಕರುಗಳು ಹಾಗೂ ಸಲಹಾ ಸಮಿತಿಯ ಸದಸ್ಯರ ಸೇವೆ ಮರೆಯುವಂತಿಲ್ಲ.


ಮಾತೃಭೂಮಿಯ ಆರಂಭ ಕಾಲದ ಕಾರ್ಯಾಧ್ಯಕ್ಷರಾಗಿದ್ದ ದಿ.ವಿಜಯಕುಮಾರ್ ಸಿ. ಶೆಟ್ಟಿ, ಬಳಿಕದ ವರ್ಷಗಳಲ್ಲಿಭುಜಂಗ ಎಮ್ ಶೆಟ್ಟಿ, ದಿ.ಸೀತಾರಾಮ ಶೆಟ್ಟಿ ಕಡಂದಲೆ, ಶಿವರಾಮ ಜಿ.ಶೆಟ್ಟಿ, ಕೆ. ಡಿ ಶೆಟ್ಟಿ, ಸಿಎ ಶಂಕರ್ ಶೆಟ್ಟಿ ಇದೀಗ ಕಾರ್ಯಾಧ್ಯಕ್ಷರಾಗಿರುವ ರತ್ನಾಕರ ಶೆಟ್ಟಿ ಯವರ ಅದಮ್ಯ ಉತ್ಸಾಹ, ಪರಿಶ್ರಮ ಶ್ಲಾಘನೀಯವಾಗಿದೆ. ಮುಂಬೈ ಮಹಾನಗರ ಹಾಗೂ ಉಪನಗರಗಳಲ್ಲಿರುವ ಸಾರ್ವಜನಿಕ ಹಿತದೃಷ್ಟಿಯನ್ನಿಟ್ಟುಕೊಂಡು ಬೆಳದಿರುವ ಮಾತೃಭೂಮಿ ಕೋವಿಡ್-19 ಪ್ರಭಾವದಿಂದ ಆದ ಆರ್ಥಿಕ ಹಿಂಜರಿತದ ಹೊರತಾಗಿಯೂ  ತನ್ನ ಆರ್ಥಿಕ ಸ್ಥಿತಿಯನ್ನು ಸಮತೋಲನದಲ್ಲಿ ಇರಿಸಿಕೊಂಡು ಗ್ರಾಹಕರ ವಿಶ್ವಾಸ ಹಾಗೂ ಅವಶ್ಯಕತೆಗಳಿಗೆ ಪೂರಕವಾಗಿ ಸ್ಪಂದಿಸುತ್ತಾ ಅವರ ಪ್ರಶಂಸೆಗೆ ಪಾತ್ರವಾಗಿದೆ.


2021 ಮಾರ್ಚ್ 31 ರವರೆಗಿನ ಆರ್ಥಿಕ ಸೂಕ್ಷ್ಮಾವಲೋಕನದಂತೆ ಮಾತೃಭೂಮಿ ಶೇರು ಬಂಡವಾಳ 2370.32 ಲಕ್ಷಕ್ಕೇರಿದ್ದು ಒಟ್ಟು ಸಂಗ್ರಹ ರೂ.2340.16, ಒಟ್ಟು ಠೇವಣಿ s.8020.34 ಲಕ್ಷಕ್ಕೆ ತಲುಪಿದೆ.  ಒಟ್ಟು ಮುಂಗಡ ಮೊತ್ತ ರೂ.9791.20 ಲಕ್ಷ ವರ್ಕಿಂಗ್ ಕ್ಯಾಪಿಟಲ್ ರೂ.13,565.86, ನಿವ್ವಳ ಲಾಭ 324.31 ಲಕ್ಷ (105.09 ಲಕ್ಷ ಎನ್ ಪಿಎ ಮೀಸಲಿಟ್ಟಿದೆ) ಹಾಗೂ ಗ್ರಾಹಕರಿಗಾಗಿ ಪೂರ್ವಘೋಷಿತ ಶೇಕಡಾ 11 ರಷ್ಟು ಡಿವಿಡೆಂಡ್ ವಿತರಿಸಲಾಗುತ್ತಿದೆ.


ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮುಂಬಯಿಯ ಮಹಾನಗರ ಹಾಗು ಉಪನಗರದ ಸಾಕಿನಾಕ, ಥಾಣೆ, ನಾಲಾಸೋಪರಾ, ಖಾರ್ಘರ್, ಕಲ್ಯಾಣ್, ಪುಣೆ, ನಾಸಿಕ್, ರಾಯಘಡ ಜಿಲ್ಲೆಗಲ್ಲಿಗೂ ವಿಸ್ತರಿಸಲಾಗಿದೆ. ಎಲ್ಲಾ ಶಾಖೆಗಳಿಕೆ ಮಾತೃಭೂಮಿ ಆಡಳಿತವು ಈಗಾಗಲೇ ಸ್ವತಂತ್ರ ಅಧಿಕಾರವನ್ನು ನೀಡಿರುವದಲ್ಲದೆ, ಯಾವುದೇ ಬ್ಯಾಂಕ್ ಗ್ರಾಹಕರಿಗೆ ನೀಡುವ ಸೇವೆಗೆ ಅನುಗುಣವಾಗಿ ಸಂಪೂರ್ಣ ಸೇವೆ ಒದಗಿಸಲುಶಾಖೆಗಳಿಗೆ ಸ್ವಾಯತ್ತತೆ ಕಲ್ಪಿಸಲಾಗಿದೆ.

Pages