ಮಂಗಳೂರು : ಕೆಲವು ದಿನಗಳ ಹಿಂದೆ ಉಳ್ಳಾಲದಲ್ಲಿ ಕಾಮುಕನೊಬ್ಬ 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದಾಗ ಸಾಮಾಜಿಕ ಕಾರ್ಯಕರ್ತ ಯಶು ಪಕಳ ಅವರು ಮಗುವನ್ನು ರಕ್ಷಿಸಿ ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು. ಯಶು ಪಕಳ ಅವರ ಈ ಕಾರ್ಯವನ್ನು ಶ್ಲಾಘಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಅವರನ್ನು ಗೌರವಿಸಿ ಸನ್ಮಾನಿಸಿತು.


ಸೆ.23ರಂದು ಮಾತೃಸಂಘದ
ಅಮೃತೋತ್ಸವ ಕಟ್ಟಡದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಯಶು ಪಕಳ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ
ಸನ್ಮಾನಿಸಿದರು.
ಈ
ಸಂದರ್ಭ ಜಾಗತಿಕ ಬಂಟರ
ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,
ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು
ಹಾಗೂ ಒಕ್ಕೂಟದ ಪೋಷಕರಾದ ಮುಂಡ್ಕೂರು ರತ್ನಾಕಾರ ಶೆಟ್ಟಿ, ಲಯನ್ಸ್ ವಸಂತ ಶೆಟ್ಟಿ, ಒಕ್ಕೂಟದ ಕಾರ್ಯದರ್ಶಿ
ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು
ಮೋಹನ್ ದಾಸ್ ಶೆಟ್ಟಿ, ಜತೆ
ಕಾರ್ಯದರ್ಶಿ ಸಂಕಬೈಲ್
ಸತೀಶ್ ಅಡಪ, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ನಿರ್ದೇಶಕರು,
ಮಹಾ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.