ವಿಸ್ಟಾಡೋಮ್ ರೈಲಿನಲ್ಲಿ ಹಾಡಿನ ಮೂಲಕ ಪ್ರಯಾಣಿಕರನ್ನು ರಂಜಿಸಿದ ಗುರುಕಿರಣ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಸ್ಟಾಡೋಮ್ ರೈಲಿನಲ್ಲಿ ಹಾಡಿನ ಮೂಲಕ ಪ್ರಯಾಣಿಕರನ್ನು ರಂಜಿಸಿದ ಗುರುಕಿರಣ್

Share This

ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ, ಗಾಯಕ, ನಟ ಗುರುಕಿರಣ್ ಅವರು ಮಂಗಳೂರು-ಯಶವಂತಪುರ ರೈಲಿಗೆ ಇತ್ತೀಚೆಗೆ ಹೊಸತಾಗಿ ಜೋಡಿಸಲಾದ ವಿಸ್ಟಾಡೋಮ್ ಬೋಗಿಯಲ್ಲಿ ಪತ್ರಕರ್ತರ ಜೊತೆ ಪ್ರಯಾಣ ಮಾಡಿದರು. ಮಂಗಳೂರಿನಿಂದ ಹಾಸನ ತನಕ ಪತ್ರಕರ್ತರ ಮಧ್ಯೆ ಕುಳಿತು ಪ್ರಯಾಣಿಸಿದ ಅವರು ವಿಸ್ಟಾಡೋಮ್ ಮೂಲಕ ಪಶ್ಚಿಮ ಘಟ್ಟದ ಸೌಂದರ್ಯವನ್ನು ಆಸ್ವಾದಿಸುತ್ತಾ  ಸಂಗೀತ ರಸಧಾರೆ ಹರಿಸುವ ಮೂಲಕ ಪತ್ರಕರ್ತರನ್ನು ಹಾಗು ಸಹ ಪ್ರಯಾಣಿಕರನ್ನು ರಂಜಿಸಿದರು.

ಅವರು ಪ್ರಕೃತಿಯನ್ನು ವರ್ಣಿಸುವ ಹಾಡುಗಳ ಮೂಲಕ ಹಾಡು ಮತ್ತು ಮಾತನ್ನು ಆರಂಭಿಸಿದ ಅವರು ಪತ್ರಕರ್ತರ ಮತ್ತು ಸಹ ಪ್ರಯಾಣಿಕರ ಬೇಡಿಕೆಯಂತೆ ಹಲವಾರು ಹಾಡುಗಳನ್ನು ಹಾಡಿದರು.ಅದ್ಭುತ ಕಂಠ ಸಿರಿಯ ಗಾಯಕ ಮೋಹನ್ ಗುರುಕಿರಣ್ ಅವರಿಗೆ ಸಾಥ್ ನೀಡಿದರು.


35 ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟ .. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ  ಹಾಸನದಲ್ಲಿ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಪತ್ರಕರ್ತರ ಜೊತೆ ಗುರುಕಿರಣ್ ವಿಸ್ಟಾಡೋಮ್ ರೈಲಿನಲ್ಲಿ ಪ್ರಯಾಣ ಮಾಡಿದರು. ಏಳು ವರ್ಷಗಳ ಬಳಿಕ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ ಅವರು ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಮಂಗಳೂರು-ಬೆಂಗಳೂರು ರೈಲಿಗೆ ಅಳವಡಿಸಿದ ವಿಸ್ಟಾಡೋಮ್ ಬೋಗಿಯ ಪ್ರಯಾಣವನ್ನು ಪತ್ರಕರ್ತರ ಜೊತೆ ಎಂಜಾಯ್ ಮಾಡಿದರು.


ಕರಾವಳಿಯ ಮಾತ್ರವಲ್ಲದೆ ಕರ್ನಾಟಕದ ಪ್ರವಾಸೋದ್ಯಮದ  ಬೆಳವಣಿಗೆಗೆ ವಿಸ್ಟಾಡೋಮ್ ರೈಲು ಉತ್ತೇಜನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರವಾಸಕ್ಕಾಗಿ ವಿದೇಶವನ್ನು ಅರಸಿ ಹೋಗುವ ನಾವು ನಮ್ಮಲ್ಲಿರುವ ಅದ್ಭುತ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಕಾಣುವುದೇ ಇಲ್ಲ. ವಿಸ್ಟಾಡೋಮ್ ರೈಲಿನಂತಹಾ ನೂತನ ವ್ಯವಸ್ಥೆಗಳು ನಮ್ಮ ಪಶ್ಚಿಮ ಘಟ್ಟದ ಪ್ರಕೃತಿಯಲ್ಲಿ ಅಡಗಿರುವ ಅದ್ಭುತ ಸೌಂದರ್ಯವನ್ಮು ತೆರೆದಿಡಲು ಪೂರಕವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಪ್ರವಾಸೋದ್ಯಮದ ಬೆಳವಣಿಗೆಗೆ ರೀತಿಯ ವ್ಯವಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು. (ವರದಿ:ಗಂಗಾಧರ ಕಲ್ಲಪಳ್ಳಿ)

Pages