ಬೆಂಗಳೂರು: ಸಿಎಂ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಕುಂದಾಪುರ ವಾಜಪೇಯಿ ಎಂದೇ ಖ್ಯಾತರಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂತ್ರಿ ಹುದ್ದೆ ನೀಡಲು ಆಗ್ರಹಿಸಿ ಅವರ ಅಭಿಮಾನಿಗಳ ಬೃಹತ್ ಜನಾಗ್ರಹ ಶಕ್ತಿ ಪ್ರದರ್ಶನವು ಬೆಂಗಳೂರಲ್ಲಿ ಕಂಡು ಬಂದಿದೆ.


ಸತತ 5 ಬಾರಿ ಶಾಸಕರಾದರೂ
ಪಕ್ಷವು ಇದುವರೆಗೆ ಹಾಲಾಡಿ ಅವರಿಗೆ ಮಂತ್ರಿ ಸ್ಥಾನ ನೀಡದಿರುವ ಕಾರಣ ಬೇಸತ್ತಿರುವ ಹಾಲಾಡಿ ಅಭಿಮಾನಿಗಳು
ಬೆಂಗಳೂರಲ್ಲಿ ಸೇರಿ ಸಚಿವ ಸ್ಥಾನ ನೀಡುವಂತೆ ಜನಾಗ್ರಹ ಮಾಡುವ ಮೂಲಕ ಆಗ್ರಹಿಸುತ್ತಿದ್ದಾರೆ.
ಸರ್ಕಾರ ಇನ್ನಾದರೂ
ಪಕ್ಷದಲ್ಲಿ ಹಿರಿಯರಾದ ಹಾಲಾಡಿ ಅವರಿಗೆ ಸರಿಯಾದ ಸ್ಥಾನಮಾನ ನೀಡಲಿದೆಯೇ ಎಂಬುದನ್ನು ಕಾದು ನೋಡ ಬೇಕಾಗಿದೆ.