ಬೆಂಗಳೂರು : HDFC ಬ್ಯಾಂಕ್ ತಮಿಳುನಾಡು ವಿಭಾಗದ ನೇಮಕಾತಿಗೆ ದಿನಪತ್ರಿಕೆಯಲ್ಲಿ ನೀಡಿರುವ ಜಾಹೀರಾತು ಭಾರಿ ವಿವಾದವನ್ನು ಉಂಟು ಮಾಡಿದ್ದು ಕಡೆಗೆ ಬ್ಯಾಂಕ್ ತಪ್ಪೊಪ್ಪಿಕೊಂಡು ಸೃಷ್ಟೀಕರಣ ನೀಡುದರೊಂದಿಗೆ ವಿವಾದ ತಣ್ಣಗಾಗಿದೆ.
ಬ್ಯಾಂಕ್ ನೇಮಕಾತಿಗೆ
ಸಂಬಂಧಿಸಿದಂತೆ ಪತ್ರಿಕೆಯಲ್ಲಿ ನೀಡಿರುವ ಜಾಹೀರಾತಿನಲ್ಲಿ 2021ರಲ್ಲಿ ಪಾಸಾದ ವಿದ್ಯಾರ್ಥಿಗಳು ಸಂದರ್ಶನಕ್ಕೆ
ಅರ್ಹರಲ್ಲ ಎಂಬ ಮಾಹಿತಿ ಪ್ರಕಟಿಸಿತ್ತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಹೀರಾತು ವೈರಲ್ ಆಗಿದ್ದು
ಬಹಳಷ್ಟು ಟೀಕೆಗೆ ಒಳಗಾಗಿತ್ತು.
ನಂತರ ಎಚ್ಚೆತ್ತ
ಬ್ಯಾಂಕ್ ಜಾಹೀರಾತು ಟೈಪಿಂಗ್’ನಲ್ಲಿನ ತಪ್ಪಿನಿಂದ ‘ಅರ್ಹರಲ್ಲ’ ಪದ ಬಳಕೆಯಾಗಿದ್ದು 2021ರಲ್ಲಿ ಪಾಸಾದವರು
ಕೂಡ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಸೃಷ್ಟೀಕರಣ ನೀಡಿದೆ.