ಕೇವಲ ಸಿನಿಮಾ ನಟನಾಗದೆ ಸೇವೆಯ ಮೂಲಕ ಜನನಾಯಕನಾದ ರೂಪೇಶ್ ಶೆಟ್ಟಿ ಜನುಮ ದಿನವಿಂದು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೇವಲ ಸಿನಿಮಾ ನಟನಾಗದೆ ಸೇವೆಯ ಮೂಲಕ ಜನನಾಯಕನಾದ ರೂಪೇಶ್ ಶೆಟ್ಟಿ ಜನುಮ ದಿನವಿಂದು

Share This

ಮಂಗಳೂರು : ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದು ತುಳು, ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚುತ್ತಿರುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರಿಗೆ ಜನುಮ ದಿನದ ಹಾರ್ಧಿಕ ಶುಭಾಶಯಗಳು.

ರೂಪೇಶ್ ಶೆಟ್ಟಿ ಅವರು ಕೇವಲ ಸಿನಿಮಾದಲ್ಲಿ ಮಾತ್ರ ನಾಯಕರಾಗದೇ ಸಮಾಜ ಸೇವೆಯ ಮೂಲಕ ಜನನಾಯಕರಾಗಿದ್ದಾರೆ. ಲಾಕ್ಡೌನ್ ಸಂದರ್ಭ ತನ್ನದೇ ಸಮಾಜ ಸೇವೆಯ ತಂಡ ಕಟ್ಟಿಕೊಂಡು ದಾನಿಗಳ ಮೂಲಕ 5,000ಕ್ಕೂ ಅಧಿಕ ಜನರಿಗೆ ಕೈಯಿಂದಾಗುವ ಸಹಾಯ ನೀಡಿದ್ದಾರೆ.

ತಾನೊಬ್ಬ ನಟನೆಂಬ ಹಮ್ಮಿಲ್ಲದೆ ತುಳುನಾಡಿನ ಪ್ರತಿಯೊಂದು ಭಾಗದಲ್ಲಿ ತಾವೇ ಸ್ವತಃ ಪ್ರತಿ ಅಶಕ್ತ, ಆರ್ಥಿಕ ದುರ್ಬಲರಾಗಿರುವ ಮನೆಗಳಿಗೆ ಭೇಟಿ ಕೊಟ್ಟು ಅವರ ಕಷ್ಟಗಳನ್ನು ಅರಿತು ಸಹಾಯ ಮಾಡಿದ್ದಾರೆ. ಇವರ ಈ ಸೇವೆಯೆ ಇಂದು ರೂಪೇಶ್ ಶೆಟ್ಟಿ ಅವರನ್ನು ಜನನಾಯಕನಾಗಿಸಿದೆ. ಈ ಕಾರಣಕ್ಕಾಗಿಯೇ ಎನೋ ಇವರ ಸಿನಿಮಾ ತೆರೆ ಕಂಡರೆ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿರುತ್ತಾರೆ.


ಇಂತಹ ಉತ್ತಮ ಸಮಾಜಮುಖಿ ನಟ ರೂಪೇಶ್ ಶೆಟ್ಟಿ ಅವರ ಸಿನಿ ಜೀವನ ಮತ್ತಷ್ಟು ಪ್ರಜ್ವಲಿಸಲಿ ಎಂದು ಈ ಮೂಲಕ ಹಾರೈಸುತ್ತೇವೆ.

Pages