ಮಂಗಳೂರು: ರಾಜ್ಯದ ಹಲವೆಡೆ ಕಳ್ಳರ, ದರೋಡೆಕೋರರ ಹಾವಳಿ ಹೆಚ್ಚಾಗಿದ್ದು ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ವಸ್ತುಗಳ ಮಾರಾಟದ ರೂಪದಲ್ಲಿ ಮನೆಮನೆಗೆ ತೆರಳುವ ತಂಡ ಮನೆಮಂದಿಗೆ ಮಂಕುಬೂದಿ ಎರಚಿ ಮನೆಯಲ್ಲಿನ ವಸ್ತುಗಳನ್ನು ಕದಿಯುತ್ತಿದ್ದಾರೆ. ಕೆಲವೊಂದು ದರೋಡೆಕೋರ ಗುಂಪು ನಡುರಾತ್ರಿ ಮನೆಗೆ ಏಕಾಎಕಿ ನುಗ್ಗಿ ದರೋಡೆ ಮಾಡುವ ಸಾಧ್ಯತೆ ಬಗ್ಗೆ ಎಚ್ಚರಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪುತ್ತೂರಿನಲ್ಲಿ
ಮನೆಗೆ ಬಂದ ಖಾವಿಧಾರಿಗಳ ಗುಂಪು ಪ್ರಸಾದ ರೂಪದಲ್ಲಿ ತಿನ್ನಲು ಕೊಟ್ಟು ಮನೆಮಂದಿಗೆ ಮತಿಭ್ರಮಣೆ ಮಾಡಿ
ಹಣ ದೋಚಿದ ಪ್ರಕರಣ ನಡೆದಿದೆ. ಅಲ್ಲದೆ ಇತ್ತಿಚಿಗಷ್ಟೇ ಉಡುಪಿ ಕಡೆ ಮನೆಗಳಿಗೆ ಫಿನಾಯಿಲ್ ಇನ್ನಿತರ
ಸುಗಂಧಭರಿತ ವಸ್ತುಗಳ ಮಾರಾಟ ತಂಡ ಫಿನಾಯಿಲ್ ವಾಸನೆಗೆ ಮನೆಮಂದಿಗೆ ಪ್ರಜ್ನೆ ತಪ್ಪಿಸಿ ಮನೆ ದೋಚಲು
ಪ್ರಯತ್ನಿಸಿದ ಘಟನೆಯೂ ನಡೆದಿದೆ.
ಹಾಗಾಗಿ ಎಚ್ಚರದಿಂದಿದ್ದು ಯಾವುದೇ ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಸಂಶಯಾಸ್ಪದವಾಗಿ ನಿಮ್ಮ ಪರಿಸರದಲ್ಲಿ ಕಂಡು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.