ಮಂಗಳೂರು : ಮಂಗಳೂರು ಸಮುದ್ರದಲ್ಲಿ ಮುಳುಗುತ್ತೆ ನಾಸಾ ವರದಿ ಎಂಬ ಊಹಾಪೊಹಾ ಸುದ್ದಿಗಳು ಇದೀಗ ಸುದ್ದಿಯಲ್ಲಿದೆ.


ಆದರೆ ಇದು ಈಗೀಗ ಸುದ್ದಿಯಲ್ಲ, ಇದು 2017ರ ರಾಷ್ಟ್ರೀಯ ನ್ಯೂಸ್ ಪೊರ್ಟಲ್’ಗಳಲ್ಲಿ ಬಂದು ಹೋಗಿರುವ ಸುದ್ದಿ. ಭೂಮಿಯ ಉಷ್ಣತೆಗೆ ಸರಿಯಾಗಿ ಹಿಮಾ ಕರಗುವ ಪ್ರಮಾಣವು ಅವಲಂಬಿಸಿರುತ್ತದೆ. ಉಷ್ಣತೆ ಹೆಚ್ಚಿದಂತೆ ಹಿಮಾ ಕರಗಿ ನೀರು ಸಮುದ್ರ ಸೇರುವ ಪ್ರಮಾಣವು ಅಧಿಕವಾಗಿತ್ತದೆ.
ಈ ಪ್ರಕ್ರಿಯೆ ಇಂದು ನಿನ್ನೆಯದಲ್ಲ, ಇದು ಭೂಮಿ ಸೃಷ್ಟಿಯಾಗಿದ್ದಿನಿಂದಲೂ ನಡೆದುಕೊಂಡು ಬಂದಿರುವ ಸಹಜ ಪ್ರಕ್ರಿಯೆ. ಆದರೆ ಇಂದು ಮನುಷ್ಯನ ಅಪರಿಮಿತ ಆಸೆ, ಅಕಾಂಕ್ಷೆಗಳಿಗೆ ಬಲಿಯಾಗಿ ವಾತಾವರಣದ ಉಷ್ಣತೆ ಹೆಚ್ಚುತ್ತಿದ್ದು ಹಿಮಾ ಕರಗುವ ಪ್ರಕ್ರಿಯೆ ವೇಗ ಹೆಚ್ಚಿದೆ. ಇದರಿಂದ ಸಮದ್ರಕ್ಕೆ ಸೇರುವ ನೀರಿನ ಪ್ರಮಾಣ ಹೆಚ್ಚುತ್ತಿದೆ ಎನ್ನಾಲಾಗಿದೆ. ಹಾಗಾದ ಮಾತ್ರಕ್ಕೆ ಒಮ್ಮೆಲೆ ಕರಾವಳಿ ತೀರಗಳ ಭೂಭಾಗಗಳು ಸಮುದ್ರ ಪಾಲಾಗುತ್ತದೆ ಎಂದು ಹೇಳಾಲಾಗುವುದಿಲ್ಲ.
ಇದೊಂದು ಧೀರ್ಘಕಾಲದಲ್ಲಿ
ನಡೆಯುವ ಪ್ರಕ್ರಿಯೆಯಾಗಿದ್ದು ಇದು ನಡೆಯಲು ಇನ್ನೂ ಸಹಸ್ರ ವರ್ಷಗಳು ಬೇಕಾಗಲೂ ಬಹುದು. ಇದಕ್ಕಿಂತ
ಹೆಚ್ಚಾಗಿ ಬೇಸಿಗೆಯಲ್ಲಿ ಶಾಂತವಾಗಿರುವ ಕಡಲುಗಳು ಮಳೆಗಾಲದಲ್ಲಿ ಭೋರ್ಗೊರೆಯುತ್ತ ಕಡ್ಕೋರೆತದ ಹೆಸರಲ್ಲಿ
ಸಾಕಷ್ಟು ಪ್ರಮಾಣದ ಭೂಮಿಯನ್ನು ತನ್ನ ತೆಕ್ಕೆಗೆ ಪಡೆಯುತ್ತಿದೆ. ಇದು ಹಿಮಾ ಕರಗಿ ಸಮುದ್ರದ ಮಟ್ಟ
ಏರಿಕೆಗಾಗುವುದಕ್ಕಿಂತಯೂ ಅಪಾಯಕಾರಿ.
ಇನ್ನೂ ನಾಸಾ ವರದಿಗೆ
ಸಂಬಂಧಪಟ್ಟಂತೆ ಯಾವುದೇ ದಾಖಲೆಗಳಿಲ್ಲ. ಕೇವಲ ಉಹಾಪೋಹಾಗಳೇಗಷ್ಟೇ. ಸಮುದ್ರ ಮಟ್ಟದ ನೀರು ಏರಿಕೆಯಾಗುವುದು,
ಕಡಿಮೆಯಾಗುವುದು ಭೂಭಾಗ ಸಮುದ್ರ ಪಾಲಾಗುವುದು ಪ್ರಕೃತಿ ಸಹಜ ಪ್ರಕ್ರಿಯೆ. ಈ ಬಗ್ಗೆ ಕಡಲಭಾಗದ ಜನರಿಗೆ
ನಾಸಾ ವಿಜ್ಞಾನಿಗಳಿಗೆ ಇರುವಷ್ಟೇ ಅರಿವಿದೆ. ಮನುಷ್ಯ ಪ್ರಕೃತಿ ರಕ್ಷಣೆಯಲ್ಲಿ ತೊಡಗಿದರೆ, ಪ್ರಕೃತಿಪೂರಕ
ಕೆಲಸಗಳು ಮಾಡಿದಲ್ಲಿ ಹಿಮಾ ಕರಗಿ ಸಮುದ್ರ ಸೇರುವ ಪ್ರಕ್ರಿಯೆ ವೇಗ ಕಡಿಮೆಯಾಗುತ್ತದೆ.