ಆಗಸ್ಟ್ 8 : ಅವಧೂತ ಶ್ರೀ ಭಗವಾನ್ ನಿತ್ಯಾನಂದರ ಮಹಾಸಮಾಧಿಯ ಪವಿತ್ರ ದಿನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆಗಸ್ಟ್ 8 : ಅವಧೂತ ಶ್ರೀ ಭಗವಾನ್ ನಿತ್ಯಾನಂದರ ಮಹಾಸಮಾಧಿಯ ಪವಿತ್ರ ದಿನ

Share This

ಮುಂಬೈ: ಇಂದು ಭಾರತದ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಅವಧೂತ ಶ್ರೀ ಭಗವಾನ್ ನಿತ್ಯಾನಂದರು ಮಹಾಸಮಾಧಿಯಾದ ಪವಿತ್ರ ದಿನ.

ಗುರು ನಿತ್ಯಾನಂದರು 1897ರಂದು ಕೇರಳದಲ್ಲಿ ಜನಿಸಿದರು. ತದನಂತರ ತಮ್ಮ ಜೀವಿತಾವಧಿಯಲ್ಲಿ ಲೋಕ ಸಂಚಾರದ ಮೂಲಕ ಆಧ್ಯಾತ್ಮದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಿದರು. ಅದೇಷ್ಟೋ ಮಂದಿ ಭಕ್ತರ ಕಷ್ಟಗಳನ್ನು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಪರಿಹರಿಸಿದ ಮಹಾನ್ ಗುರುಗಳು. ಭಕ್ತರ ಮನದ ಬಯಕೆ, ನೋವುಗಳನ್ನು ತಮ್ಮ ಒಳಗಣ್ಣಿನಿಂದ ಅರಿತು ಪರಿಹಾರ ಮಾಡಿದ ಅದೆಷ್ಟೋ ಘಟನೆಗಳು ಇಂದಿಗೂ ಜನಜನಿತವಾಗಿದೆ.


ಇಂದು ತುಳುನಾಡಿನಲ್ಲಿ, ಮುಂಬೈಯಲ್ಲಿ ನೆಲೆಸಿರುವ ತುಳುವ ಜನರ ಪ್ರತಿ ಮನೆಗಳಲ್ಲೂ ಭಗವಾನ್ ನಿತ್ಯಾನಂದರ ಫೋಟೊ ಕಾಣಬಹುದು. ಬಂಟರ ಸಂಘಗಳಲ್ಲೂ ನಿತ್ಯಾನಂದ ಗುರುಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ವಿಶ್ವದೆಲ್ಲೆಡೆ ಭಗವಾನ್ ನಿತ್ಯಾನಂದರ ಭಕ್ತರಿದ್ದು ಗುರು ಸ್ಥಾನದಲ್ಲಿ ಭಕ್ತಿಯಿಂದ ಪೂಜಿಸುತ್ತಾರೆ. ಭೌತಿಕವಾಗಿ ಇರದಿದ್ದರೂ ಆಧ್ಯಾತ್ಮಿಕವಾಗಿ ಇಂದಿಗೂ ನಿತ್ಯಾನಂದ ಗುರುಗಳು ತಮ್ಮ ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತ ಮಾರ್ಗದರ್ಶಕರಾಗಿದ್ದಾರೆ.


ತಮ್ಮ ಜೀವಿತಾವಧಿಯಲ್ಲಿ ಹಲವಾರು ಪವಾಢಗಳನ್ನು ಮಾಡಿ ಆಧ್ಯಾತ್ಮಿಕತೆಯ ಬೆಳಕನ್ನು ನೀಡಿದ ನಿತ್ಯಾನಂದ ಗುರುಗಳು 8 ಆಗಸ್ಟ್ 1961 ರಲ್ಲಿ ಮಹಾಸಮಾಧಿಯಾದರು. ಅವರ ಪ್ರಮುಖ ಆಶ್ರಮ ಗಣೇಶಪುರಿಯಲ್ಲಿ ಮಹಾ ಸಮಾಧಿಯಿದೆ.

Pages