ಬಂಟ್ಸ್ ನ್ಯೂಸ್, ಮಂಗಳೂರು : ಮಂಗಳೂರಿನ ಅನಾಥ ಪ್ರಾಣಿಗಳ ಸಲಹುವ ಮಹಾತಾಯಿ ರಜನಿ ಶೆಟ್ಟಿ ಅವರು 20 ಅಡಿ ಆಳದ ಹಳೆ ಬಾವಿಗೆ ಇಳಿದು ಬೆಕ್ಕಿನ ಮರಿಗಳನ್ನು ರಕ್ಷಿಸಿದ್ದಾರೆ.


ನಗರದ ಕಾಸಿಯಾ ಹೈಸ್ಕೂಲ್
ಬಳಿಯ ಬಾವಿಗೆ ಬೆಕ್ಕಿ ಮರಿಗಳು ಬಿದ್ದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ರಜನಿ ಶೆಟ್ಟಿ ಅವರು
ಸ್ಥಳೀಯರ ಸಹಕಾರದಿಂದ ಬಾವಿಗಿಳಿದು ಬೆಕ್ಕಿನ ಮರಿಗಳನ್ನು ರಕ್ಷಿಸಿದ್ದಾರೆ. ರಜನಿ ಶೆಟ್ಟಿ ಅವರು ಈ
ಹಿಂದೆಯೂ ಬಾವಿಗೆ ಬಿದ್ದಿದ್ದ ಶ್ವಾನ ರಕ್ಷಿಸಿ ಸುದ್ದಿಯಾಗಿದ್ದರು.
ರಜನಿ ಶೆಟ್ಟಿ ಅವರು
ಮೂಕ ಪ್ರಾಣೆಗಳ ನೋವಿಗೆ ಧ್ವನಿಯಾಗಿ ಅವುಗಳ ರಕ್ಷಣೆ, ಪಾಲನೆಯ ಕೆಲಸ ಮಾಡುತ್ತಿದ್ದಾರೆ. ನಿತ್ಯವೂ
ಸರಿ ಸುಮಾರು 50ಕೆಜಿಯಷ್ಟು ಅನ್ನವನ್ನು ನಗರದ ವಿವಿಧ ಭಾಗದ ಅನಾಥ ಶ್ವಾನಗಳಿಗೆ ಉಣಿಸುತ್ತಾರೆ. ಯಾವುದೇ
ಪ್ರಾಣಿ, ಪಕ್ಷಿ ಗಾಯಗೊಂಡರೆ ತಾವೇ ತಮ್ಮ ಮನೆಯಲ್ಲಿ ಆರೈಕೆ ಮಾಡಿ ಸಲಹುತ್ತಿದ್ದಾರೆ.
ಈಗಾಗಲೇ ಇವರ ನಿಸ್ವಾರ್ಥ
ಸೇವೆಗೆ ರಾಜ್ಯದೆಲ್ಲೆಡೆ ವಿವಿಧ ಸಂಘ-ಸಂಸ್ಥೆಗಳು ಗುರುತಿಸಿ ಸಮ್ಮಾನಿಸಿದೆ. ದೇಶ ವಿದೇಶಗಳಿಂದ ಪ್ರಾಣಿಗಳನ್ನು
ಆರೈಕೆಯ ಮಾಡುವ ಇವರ ನಿಸ್ವಾರ್ಥ ಸೇವೆಗೆ ಬಲವಾಗಿ ಸಾಕಷ್ಟು ಮಂದಿ ನೆರವನ್ನು ನೀಡಿ ಬೆಂಬಲಿಸುತ್ತಿದ್ದಾರೆ.