ಮಂಗಳೂರು: ಗಡಿ ಭಾಗಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಧ್ಯ ಮಾರಟ ನಿಷೇಧ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶದಿಂದ ಮಧ್ಯ ಮಾರಾಟಗಾರರು ತೀರ ನಷ್ಟ ಅನುಭವಿಸುತ್ತಿದ್ದು ಅದ್ರೊಂದಿಗೆ ಅಕ್ರಮ ಮಧ್ಯ ಮಾರಾಟ ಅವ್ಯಾಹತವಾಗಿ ಬೆಳವಣಿಗೆ ಆಗುತ್ತಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್ ಧನ್ರಾಜ್ ನೇತೃತ್ವದಲ್ಲಿ ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ವತಿಯಿಂದ ದ.ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೆಷನ್ ಲೂಯಿಸ್ ಜೆ
ಪಿಂಟೊ ಅವರು ಕೋವಿಡ್ ಪರಿಸ್ಥಿತಿಯಿಂದ ಮುಂಗಡವಾಗಿ ಸನ್ನದು ಶುಲ್ಕ ಪಾವತಿಸಿ ಲೈಸನ್ಸ್ ಪಡೆದು ಕಾನೂನು
ಬದ್ದವಾಗಿ ವ್ಯವಹಾರ ನಡೆಸುತ್ತಿದ್ದು ಹೆಚ್ಚಿನ ಸನ್ನದುದಾರರು ತೀರ ನಷ್ಟ ಅನುಭವಿಸುತ್ತಿದ್ದಾರೆ ಮಾತ್ರವಲ್ಲದೆ
ಇತ್ತೀಚೆಗೆ ಜಿಲ್ಲಾಡಳಿತ ಹೊರಡಿಸಿದ ನೂತನ ಆದೇಶದಿಂದ
ಗಡಿ ಭಾಗಗಳಲ್ಲಿ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿದ್ದು ಜನ್ರು ದುಪ್ಪಟ್ಟು ಬೆಲೆ ನೀಡಿ ಪಡೆಯುವಂತಾಗಿದ್ದು ಅಕ್ರಮ ಮಧ್ಯ ತಡೆಯುವಲ್ಲಿ
ಅಧಿಕಾರಿಗಳು ವಿಫಲವಾಗುತ್ತಿದ್ದಾರೆ.
ಇನ್ನೂ ಕೆಲ ಲಾಡ್ಜ್
ಗಳಲ್ಲಿ ಅಲ್ಲಿನ ಗ್ರಾಹಕರಿಗೆ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಇದೀಗಾ ಅವರು ನೆರೆಯ ರಾಜ್ಯಗಳಿಗೆ
ಮಧ್ಯ ಸಾಗಟ ಮಾಡುವ ಮೂಲಕ ವೈನ್ ಶಾಫ್, ಬಾರ್ ಗಳಿಂತಲೂ ದುಪ್ಪಟ್ಟು ಹಣ ಗಳಿಕೆ ಮಾಡುತ್ತಿದ್ದಾರೆ ಇದ್ರಿಂದಾಗಿ
ಸರ್ಕಾರದಿಂದ ಲೈಸೆನ್ಸ್ ಪಡೆದು ಟ್ಯಾಕ್ಸ್ ಕಟ್ಟಿ ವ್ಯವಹಾರ ನಡೆಸುವ ವೈನ್ ಮರ್ಚೆಂಟ್ ಗಳ ಪರಿಸ್ಥಿತಿ
ತೀರಾ ಸಂಕಷ್ಟ ಎದುರಿಸುವಂತಾಗಿದೆ ಮಾತ್ರವಲ್ಲದೆ ಧಾರ್ಮಿಕ ಹಬ್ಬ ಹರಿದಿನಗಳ ಸಂಧರ್ಭ ಶಾಂತಿ ಕಾಪಾಡುವ
ನಿಟ್ಟಿನಲ್ಲಿ ಬಾರ್ ವೈನ್ ಶಾಪ್ ಗಳನ್ನು ಮುಂಜಾನೆಯಿಂದಾಲೆ ಬಂದ್ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ
ಗಲಭೆಗಳು ಕುಡಿತದಿಂದ ಆಗಿಲ್ಲ ಈ ಬಗ್ಗೆ ಹಬ್ಬದ ಸಂಧರ್ಬದಲ್ಲಿ ರ್ಯಾಲಿಗೆ ಎರಡು ಗಂಟೆಗಳ ಮುಂಚಿತವಾಗಿ
ಶಾಫ್ ಬಂದ್ ಮಾಡುತ್ತೇವೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು
ಹೇಳಿದರು. ಈ ವೇಳೆ ದ.ಕ ಜಿಲ್ಲಾ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಂ ಗಣೇಶ್, ಪ್ರಧಾನ ಕಾರ್ಯದರ್ಶಿ
ಸಿ ಎನ್ ಅಪ್ಪಚ್ಚು, ಓಂ ಪ್ರಸಾದ್, ಚಂದ್ರನಾಥ್ ಅತ್ತಾವರ್
ಕರುಣಾಕರ್ ಶೆಟ್ಟಿ, ಮಂಜುನಾಥ್ ರೈ, ಎ. ನವೀನ್ ನಾಯ್ಕ್, ಶರತ್ ಮರೋಳಿ, ಅರುಣ್ ರಾಜ್, ತ್ರಿವೇಣಿ
ಪೆರುವಾಡಿ, ಮತ್ತಿತರರು ಉಪಸ್ಥಿತರಿದ್ದರು.