ಮಾವನನ್ನು ಮನೆಯಿಂದ ಹೊರ ಹಾಕಲು ಪತ್ನಿಯಿಂದ ಪತಿಗೆ ನಿತ್ಯ ಕಾಟ : ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದ ಮಗ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಾವನನ್ನು ಮನೆಯಿಂದ ಹೊರ ಹಾಕಲು ಪತ್ನಿಯಿಂದ ಪತಿಗೆ ನಿತ್ಯ ಕಾಟ : ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದ ಮಗ

Share This

ಕೆಲವು ತಿಂಗಳ ಹಿಂದೆ ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಕಣ್ಣಿದ್ದು ಕುರುಡರಂತಿರುವ ಅವಿವೇಕಿಗಳ ಕಣ್ಣು ತೆರೆಸಿದ ಪ್ರಕರಣ. ವಯಸ್ಸಾದ ತಂದೆಯನ್ನು ಪ್ರೀತಿಸುವ ಮಗನೊಬ್ಬ ತಂದೆಯನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಕದ ತಟ್ಟಿದ ಅಪ್ಪನ ಮೇಲಿನ ಮಗನ ಮಮಕಾರದ ಪ್ರಕರಣಹೆತ್ತವರು ಮಕ್ಕಳಿಗಾಗಿ ಬದುಕುವುದು, ತಮ್ಮ ಬದುಕನ್ನು ತ್ಯಾಗ ಮಾಡುವುದು ಇದ್ದದ್ದೆ  ಬಿಡಿ. ಅದು ತಮ್ಮ ಕರ್ತವ್ಯ, ಹೊಣೆಗಾರಿಕೆ, ಜವಾಬ್ದಾರಿ,ಪ್ರೀತಿ, ಮಮತೆ, ವಾತ್ಸಲ್ಯ ಹೀಗೆ ಅನೇಕ ರೀತಿಯ ಬಂಧನದಿಂದ ಮಕ್ಕಳಿಗೆ ಒಳ್ಳೆಯದನ್ನು ಮಾಡುತ್ತಾರೆ, ಬಯಸುತ್ತಾರೆ ಹೆತ್ತವರು.

ಹೆತ್ತವರಿಗೆ ಇಳಿ ವಯಸಿನಲ್ಲಿ ಗೌರವ ಕೊಡದ, ಅಮಾನವೀಯವಾಗಿ ನಡೆಸಿ ಕೊಳ್ಳುವ ಅನೇಕ ಪ್ರಕರಣಗಳನ್ನು ನೋಡಿ, ಕೇಳಿ ರೋಸಿ ಹೋದವರಿಗೆ ಒಳ್ಳೆಯ ಮಕ್ಕಳ ವಿಚಾರವನ್ನು ಹೇಳಲೇ ಬೇಕು. ಕೇರಳ ನ್ಯಾಯಾಲಯದ ಮೊರೆ ಹೋದ ಮಗನೊಬ್ಬನ ನಿವೇದನೆ, ತನ್ನ ಪತ್ನಿ ತನ್ನಪ್ಪನನ್ನು ಮನೆಯಿಂದ ಹೊರ ಕಳಿಸಬೇಕೆಂದು ನಿತ್ಯವೂ ಕಾಟ ಕೊಡುತ್ತಿದ್ದಾಳೆ. ನನ್ನ ಬದುಕೇ ನನ್ನಪ್ಪ. ಅಪ್ಪನಿಲ್ಲದೆ ಬದುಕಲಾರೆ. ತಂದೆಯ ಸಮಾನರಾದ ಮಾವನನ್ನು ಮನೆಯಿಂದ  ಹೊರ ಹಾಕಬೇಕೆನ್ನುವ ಹೆಂಡತಿ ನನಗೆ ಬೇಡ. ನನಗೆ ವಿಚ್ಛೇದನ ನೀಡಿ. ನಾನು ವಯೋವೃದ್ಧ ಅಪ್ಪನೊಂದಿಗೆ ಇರುತ್ತೇನೆಂದು ಮನವಿ ಮಾಡಿದ್ದ ಮಗನ  ಪ್ರಕರಣದಲ್ಲಿ ನ್ಯಾಯಾಲಯ ಗಮನಿಸಿ ನೀಡಿದ ತೀರ್ಪು ಹೀಗಿದೆ.


ಯಾವುದೇ ಒಬ್ಬ ವ್ಯಕ್ತಿಯ  ಮೊದಲ  ಇಪ್ಪತ್ತು ವರ್ಷಗಳು ಪ್ರಮುಖವಾಗಿದೆ. ವ್ಯಕ್ತಿಯೊಬ್ಬ ಯಾವುದೇ ಉತ್ತಮ ದಾರಿ ಹಿಡಿಯಲು ಆರಂಭದ ಇಪ್ಪತ್ತು ವರ್ಷಗಳು ಹೆತ್ತವರು ಮಕ್ಕಳಿಗೆ ಪಟ್ಟ ಶ್ರಮ,ನೀಡಿದ  ಆರೈಕೆತೋರಿದ ಕಾಳಜಿವಹಿಸಿಕೊಂಡ ಜವಾಬ್ದಾರಿನಿರ್ವಹಿಸಿದ  ಕರ್ತವ್ಯ,ನೀಡಿದ ವಿದ್ಯೆ ಆರೋಗ್ಯ ಪಾಲನೆ, ಬೇಕು ಬೇಡಗಳಿಗೆ ತೊಡಗಿಸಿಕೊಂಡ ಬಗ್ಗೆ ಬೆಲೆ ಕಟ್ಟಲು ಸಾಧ್ಯವಿಲ್ಲಇಳಿ ವಯಸಿನಲ್ಲಿ ತಂದೆ, ತಾಯಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಕರ್ತವ್ಯ ಮಕ್ಕಳದ್ದು. ಮಗ ತಂದೆಯನ್ನು ತನ್ನ ಮನೆಯಲ್ಲಿ ಇರುವಂತೆ ನೋಡಿಕೊಳ್ಳಲು ಅವನ ಹೆಂಡತಿಯು ಜವಾಬ್ದಾರಳು. ಇದನ್ನು ಮರೆತು ಮಾವನನ್ನು ಹೊರ ಹಾಕಬೇಕೆನ್ನುವ ಹೆಂಡತಿಗೆ ವಿಚ್ಛೇದನ ನೀಡಬಹುದು ಎಂದು ತೀರ್ಪು ನೀಡಿರುವುದು ನ್ಯಾಯಕ್ಕೆ ಸಂದ ಜಯ.


ಮಗನಿಗೆ ತಂದೆಯ ಮೇಲಿನ ಪ್ರೀತಿಯ, ಗೌರವಕ್ಕೆ ಸಿಕ್ಕ ಜಯ. ಹೆತ್ತವರು ವಯೋವೃದ್ಧರಾಗಿ, ಮಕ್ಕಳು ಸದೃಢ ವಯಸ್ಸಿನವರಾಗಿ, ನಿಮ್ಮ ಹೆಂಡತಿ, ಮಕ್ಕಳು ಸಂಸಾರ ಕಟ್ಟಿಕೊಂಡು, ನಿಮ್ಮ ಒಳಿತಿಗಾಗಿ ಜೀವ ಸವೆಸಿದ ಹೆತ್ತವರಿಗೆ ನಿಮ್ಮಿಂದ ಏನು ಮಾಡಲು ಆಗದೇ ಹೋದರು ಚಿಂತೆ ಇಲ್ಲ. ಅವರನ್ನು ಮನುಷ್ಯರಾಗಿ ನೋಡಿ ಕೊಳ್ಳಿ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನೀವು ನಿಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಅವರಿಗೆ ಅವರ ಹೆಂಡತಿ, ಮಕ್ಕಳು, ನಿಮಗೆ ನಿಮ್ಮ ಹೆಂಡತಿ ಮಕ್ಕಳು.ಎಂತ ವಿಪರ್ಯಾಸ. ಏನು ಆಗಬಿಕಿತ್ತು ಅದು ಆಗಿದ್ದೀರಿ. ಏನು ಮಾಡಬೇಕಿತ್ತು ಅದನ್ನು ಮಾಡಲು ನಿಮಗೆ ಆಗುತ್ತಿಲ್ಲ. ಇಳಿ ವಯಸ್ಸಿನ ಹೆತ್ತವರು ಇನ್ನೇನು ಹೇಳುವರು. . ದೇವರ ದಯೆಯಿಂದ ಮುಂದಿನ ದಿನಗಳು ಭಯಾನಕವಾಗದಿರಲಿ ಎಂದಷ್ಟೇ ಹೇಳಬಹುದು. (ಬರಹ : ಅಶೋಕ್ ಕುಮಾರ್ ಶೆಟ್ಟಿ)

Pages