ಬಂಟ್ಸ್ ನ್ಯೂಸ್, ಮುಂಬೈ :
ಟೋಕಿಯೊ ಒಲಿಂಪಿಕ್ಸ್’ನಲ್ಲಿ
ತಮ್ಮ ವಿರೋಚಿತ ಬ್ಯಾಡ್ಮಿಂಟನ್ ಆಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿರಾಗ್ ಚಂದ್ರಶೇಖರ್ ಶೆಟ್ಟಿ
ಗಮನ ಸೆಳೆದಿದ್ದಾರೆ.
ಪುರುಷರ ಡಬಲ್ಸ್
ಬ್ಯಾಡ್ಮಿಂಟನ್ ಆಟದಲ್ಲಿ 10ನೇ ಶ್ರೇಯಾಂಕ ಹೊಂದಿದ್ದ ಭಾರತದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್’ರಾಜ್
ರಂಕಿರೆಡ್ಡಿ ಅದ್ಬುತ ಪ್ರದರ್ಶನ ನೀಡಿದ್ದರು. ಒಲಿಂಪಿಕ್ಸ್ ಮೊದಲ ಪಂದ್ಯದಲ್ಲಿ 3ನೇ ಶ್ರೇಯಾಂಕ ಹೊಂದಿದ್ದ
ಚೈನೀಸ್ ತೈಪೆ ಜೋಡಿ ಎದುರು ಗೆಲುವು ಸಾಧಿಸಿದ್ದರು.
ನಂತರ 1ನೇ ಶ್ರೇಯಾಂಕದ
ಇಂಡೋನೇಷ್ಯಾದ ವಿರುದ್ದ ಸೋತರೂ ಕೊನೆಯ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮುಂದೆ ಚಿರಾಗ್ ಶೆಟ್ಟಿ ತಂಡ
ಭರ್ಜರಿ ಗೆಲುವು ಸಾಧಿಸಿತು. ಗೆಲುವು ಸಾಧಿಸಿದ ತಂಡಗಳ ಪಡೆದ ಪಾಯಿಂಟ್ ಆಧಾರದಲ್ಲಿ ಕ್ವಾಟರ್ ಫೈನಲ್
ಆಡಲು ವಿಫಲವಾದರೂ ತಮ್ಮ ವಿರೋಚಿತ ಆಟದಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಸಾಧಾನೆಗಳು : 2018ರ
ಕಾಮನ್ ವೆಲ್ತ್ (Mixed team) ಚಿನ್ನ ಹಾಗೂ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್’ನಲ್ಲಿ ಬೆಳ್ಳಿ ಪಡೆದಿದ್ದಾರೆ.
ಎಷ್ಯಾ ಟೀಂ ಚಾಂಪಿಯನ್’ಶಿಪ್ 2016, 2020ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2018, 2019ರ ಅಂತರಾಷ್ಟ್ರೀಯ
ಮಟ್ಟದ ಬ್ಯಾಡ್ಮಿಂಟನ್ ವಲ್ಡ್ ಫೆಡರೇಷನ್ (BWF) ಪುರುಷರ ಡಬಲ್ಸ್’ನಲ್ಲಿ 2 ಗೆಲುವು 2 ರನ್ನರ್ ಆಪ್
ಸ್ಥಾನ ಹಾಗೂ ಬ್ಯಾಡ್ಮಿಂಟನ್ ವಲ್ಡ್ ಫೆಡರೇಷನ್ (BWF) ಇಂಟರ್ ನ್ಯಾಶನಲ್ ಚಾಲೆಂಜ್ 2016ರಿಂದ
2019ರ ವರೆಗಿನ ಪಂದ್ಯದಲ್ಲಿ ಜಯ ಗಳಿಸಿದ್ದರು.
ಚಿರಾಗ್ ಶೆಟ್ಟಿ ಅವರ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿನ ಅಮೋಘ ಸಾಧನೆಗಾಗಿ 2020ರ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ‘ಆರ್ಜುನ ಆವಾರ್ಡ್’ಗೆ ಪಾತ್ರರಾಗಿದ್ದರು. ಮೂಲತಃ ಉಡುಪಿ ಮೂಲದವರಾದ ಚಿರಾಗ್ ಶೆಟ್ಟಿ ಅವರು ತಮ್ಮ ಅಪೂರ್ವ ಕ್ರೀಡಾ ಸಾಧನೆ ಮೂಲಕ ದೇಶಕ್ಕೆ, ಬಂಟ ಸಮಾಜಕ್ಕೆ ಕೀರ್ತಿ ತಂದಿದ್ದಾರೆ.