ಉಡುಪಿ : ಇಂದಿನ ವೇಗದ ಪ್ರಪಂಚದಲ್ಲಿ ಜನ ನೆಮ್ಮದಿಗಾಗಿ ಕಡೆಗೆ ಆಧ್ಯಾತ್ಮದತ್ತ ವಾಲುವುದು ಸಹಜ, ಹಾಗೆ ಆಧ್ಯಾತ್ಮಕ್ಕೆ ಕೆಲವರು ತಮ್ಮ ಆಸಕ್ತಿಯಿಂದ ಬಂದಿದ್ದರೆ ಕೆಲವರು ತಮ್ಮ ನಾಮಬಲದಲ್ಲಿನ ತರಂಗದ ಪ್ರಭಾವದಿಂದ ಆಧ್ಯಾತ್ಮಕ್ಕೆ ಸೆಳೆಯಲ್ಪಡುತ್ತಾರೆ. ಹಾಗೆ ಆಧ್ಯಾತ್ಮಕ್ಕೆ ಸೆಳೆಯಲ್ಪಡುವರಲ್ಲಿ ‘ಶ್ರೀ’ಕಾರದಿಂದ ಹೆಸರು ಪ್ರಾರಂಭದವರೇ ಹೆಚ್ಚೆಂಬುದು ಆಶ್ಚರ್ಯಕರ ವಿಷಯವಾಗಿದೆ.
ಹಿಂದೂ ಸಂಪ್ರದಾಯದ
ಪ್ರಕಾರ ಮಗು ಹುಟ್ಟಿದ ಸಮಯಕ್ಕೆ ಅನುಗುಣವಾಗಿ ರಾಶಿ, ನಕ್ಷತ್ರ, ಗೋತ್ರ ಹಾಗೂ ರಾಶಿಗೆ ಅನುಗುಣವಾಗಿ
ಹೆಸರಿಡುವ ಕ್ರಮವು ಅನಾದಿ ಕಾಲದಿಂದಲೂ ಬಂದಿದೆ. ಹೀಗೆ ಹೆಸರಿಡುವ ಸಂದರ್ಭ ದೇವರ ಕೃಪೆಗಾಗಿ ‘ಶ್ರೀಕಾರ
ಆರಂಭದೊಂದಿಗೆ ಹೆಸರಿಡುತ್ತಾರೆ.
‘ಶ್ರೀ’ ಪದದ ಮಹತ್ವ : ‘ಶ್ರೀ’ ಪದವು ಹಿಂದೂ ಸಂಪ್ರದಾಯದ ಪ್ರಕಾರ ಅತ್ಯಂತ
ಪರಮ ಪವಿತ್ರವಾದ ಧಾರ್ಮಿಕ ಶುಭ ಸಾಂಕೇತಿಕ ಅಕ್ಷರವಾಗಿದೆ. ‘ಶ್ರೀ’ ಅಕ್ಷರವು ದೇವಿ ಲಕ್ಷ್ಮೀಯ ಅವತಾರವನ್ನು
ಸೂಚಿಸುತ್ತದೆ. ಪವಿತ್ರ ಶ್ರೀಯಂತ್ರದಲ್ಲೂ ಶ್ರೀಕಾರವಿದೆ. ಸಂಸ್ಕೃತ, ಹಿಂದಿ, ಮರಾಠಿ, ಕನ್ನಡ, ತಮಿಳು
ಹಾಗೂ ಬೇರೆ ಭಾಷೆಗಳಲ್ಲಿ ತನ್ನದೇ ಶೈಲಿಯ ಶ್ರೀಕಾರವನ್ನು ಕಾಣಬಹುದು. ಪ್ರತಿ ದೇವರು, ಗುರುಗಳ ಹೆಸರಿನ
ಮುಂಚೆ ಶ್ರೀಕಾರವಿದ್ದು ಪ್ರಾಮುಖ್ಯತೆ ಪಡೆದಿದೆ. ಅಲ್ಲದೇ ಮತ್ತೊಬ್ಬರನ್ನು ಗೌರವ ಸೂಚಕವಾಗಿ ಸೂಚಿಸುವಲ್ಲೂ
ಶ್ರೀಕಾರ ಕಾಣಬಹುದು.
ಇಷ್ಟೆಲ್ಲಾ ದೈವಿಕ ಹಿನ್ನೆಲೆಯಿರುವ ‘ಶ್ರೀ’ ಅಕ್ಷರದ ಪ್ರಭಾವವು ಶ್ರೀಕಾರದಿಂದ ಹೆಸರು ಆರಂಭವಾಗುವ ಕೆಲವರಲ್ಲಿ ಕಂಡು ಬರುತ್ತದೆ. ಇವರು ಮುಖ್ಯವಾಗಿ ಭೌತಿಕ ಆಸೆಗಳನ್ನು ತೊರೆದು ನಿರಂತರ ದೇವರ ಸ್ಮರಣ, ಜಪತಪಗಳಲ್ಲಿ ತಲ್ಲಿಣರಾಗಿರುತ್ತಾರೆ. ಸುತ್ತಲಿನ ಜನರೇ ಆಶ್ಚರ್ಯ ಪಡುವಂತೆ ಆಧ್ಯಾತ್ಮಗಳಲ್ಲಿ ಮುಳುಗಿರುತ್ತಾರೆ. (ಬರಹ : ಪಿ. ಆರ್ ಶೆಟ್ಟಿ ಉಡುಪಿ, ಆಧ್ಯಾತ್ಮ ಚಿಂತಕರು, ಸಂಖ್ಯಾ ಜ್ಯೋತಿಷ್ಯರು)