ಮಂಗಳೂರು: PM ಕನ್ಯಾ ಯೋಜನೆ ಎಂಬ ಯೋಜನೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಸುಳ್ಳು ಸುದ್ದಿಯಾಗಿದ್ದು ಜನರು ಮೋಸ ಹೋಗಬಾರದೆಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರು ಕೋರಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ PM ಕನ್ಯಾ ಯೋಜನೆಯೆಂಬ ಹೆಸರಿನಲ್ಲಿ ಕೆಳಕಂಡ ಸಂದೇಶ ಹರಿದಾಡುತ್ತಿದೆ. ಬಹಳಷ್ಟು ಜನ ಈ ನಿಟ್ಟಿನಲ್ಲಿ ಅಂಚೆ ಕಚೇರಿಗೆ ಬಂದು ವಿಚಾರಿಸುತ್ತಿದ್ದಾರೆ. ಇಂತಹ ಯಾವುದೇ ಯೋಜನೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಇದುವರೆಗೆ ಜಾರಿಗೊಳಿಸಿರುವುದಿಲ್ಲ. ಆದುದರಿಂದ ಸಾರ್ವಜನಿಕರು ಈ ಯೋಜನೆಯ ಹೆಸರಿನಲ್ಲಿ ಮೋಸ ಹೋಗದಿರಬೇಕಾಗಿ ಕೋರಿದ್ದಾರೆ.