ಬಂಟ್ಸ್ ನ್ಯೂಸ್, ಮುಂಬೈ : ಉಳ್ಳಾಲದ ಎನ್ಐಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ದಿನಪತ್ರಿಕೆಯೊಂದು ಶೀಷಿಕೆಯಲ್ಲಿ ಉಗ್ರ ಸಂಘಟನೆ ಜತೆ ಬಂಟ ಸಮಾಜದ ‘ಬಂಟ’ ಹೆಸರು ಉಲ್ಲೇಖಿಸಿ ಅವಮಾನ ಮಾಡಿರುವುದನ್ನು ಖಂಡಿಸಿ ಮುಂಬೈ ಮೂಲದ ವಕೀಲೆ ನಿರಂಜಿನಿ ಶೆಟ್ಟಿ ದೂರು ನೀಡಿದ್ದಾರೆ.
ನಿನ್ನೆಯಷ್ಟೇ ಸ್ಥಳೀಯ
ದಿನಪತ್ರಿಕೆಯಲ್ಲಿ ಮುಖಪುಟದ ಸುದ್ದಿಯ ಶೀಷಿಕೆಯಲ್ಲಿ ಈಗಾಗಲೇ ಹಿಂದೂ ಧರ್ಮದಿಂದ ಮತಾಂತರಗೊಂಡು ಉಗ್ರ
ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಅನ್ಯ ಧರ್ಮದ ಯುವತಿಯ ಬಗ್ಗೆ ಹೇಳುವಲ್ಲಿ ಅನಾವ್ಯಶಕವಾಗಿ ಬಂಟ ಸಮಾಜದ
‘ಬಂಟ’ ಹೆಸರನ್ನು ಉಲ್ಲೇಖಿಸಿ ಪ್ರಕಟಿಸಲಾಗಿತ್ತು. ತುಳುನಾಡಿನ ಪ್ರತಿಷ್ಠಿತ ಬಂಟ ಸಮಾಜ ಬಗೆಗಿನ ಈ
ರೀತಿಯ ಅವಮಾನಕಾರಿ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ವಕೀಲೆ ನಿರಂಜನಿ
ಶೆಟ್ಟಿ ಅವರು ದಿನಪತ್ರಿಕೆ ಪ್ರಸಾರವಾಗುವ ಪ್ರಮುಖ ಭಾಗಗಳಾದ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ
ಹಾಗೂ ಮಡಿಕೇರಿ ಜಿಲ್ಲೆಗಳ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ಪತ್ರಿಕೆಯು ಈ ರೀತಿ
ಸುದ್ದಿ ಪ್ರಸಾರದ ಮೂಲಕ ಸಮಾಜದ ಶಾಂತಿ ಹಾಗೂ ಸೌಹರ್ದತೆಗೆ ಭಂಗವುಂಟು ಮಾಡಿದ್ದು ಕ್ರಮ ಕೈಗೊಳ್ಳುವಂತೆ
ಕೋರಿದ್ದಾರೆ. ಅಲ್ಲದೆ ಪತ್ರಿಕೆಯು ಬಂಟ ಸಮಾಜದ ಬಳಿ ಕ್ಷಮೆ ಕೋರಿ ಮುಖಪುಟದಲ್ಲಿ ಸುದ್ದಿ ಪ್ರಕಟಿಸುವಂತೆ
ಆಗ್ರಹಿಸಿದ್ದಾರೆ.