ಬಂಟ್ಸ್ ನ್ಯೂಸ್, ಮುಂಬೈ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಕಲ್ಯಾಣ ಸೇವೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಯಶಸ್ವಿಯಾಗಿ ನಡೆಸಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವುದನ್ನು ಗಮನಿಸಿದ ಮುಂಬೈನ ಖ್ಯಾತ ಉದ್ಯಮಿ ಹೇರಂಬ ಆಗ್ರೋ ಕೆಮಿಕಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ರಘುರಾಮ ಕೆ ಶೆಟ್ಟಿ ಕೂಳೂರು ಕನ್ಯಾನ ಇವರು ಒಕ್ಕೂಟದ ಮಹಾಪೋಷಕರಾಗಿ ಸೇರ್ಪಡೆಗೊಂಡಿದ್ದಾರೆ.

ರಘುರಾಮ ಕೆ ಶೆಟ್ಟಿ
ಕೂಳೂರು ಅವರು ಒಕ್ಕೂಟದ ಮೂಲಕ ಸಮಾಜದ ಆರ್ಥಿಕ ಹಿಂದುಳಿದ ಜನರ ಸೇವೆ ಮಾಡಬೇಕೆನ್ನುವ ಹಂಬಲದಿಂದ ಒಕ್ಕೂಟ
ಸೇರ್ಪಡೆಗೊಂಡಿದ್ದು ಅವರನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೂಗುಚ್ಛ ನೀಡಿ ಅಭಿನಂದಿಸಿದರು.