ಮಂಗಳೂರು: ಮಂಗಳೂರಿನಿಂದ ಇತರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಹಾಗೂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಡಿ ಘಾಟ್ ಸೆಕ್ಷನ್ ಗಳಲ್ಲಿ ಭೂಕುಸಿತ ತಡೆಗಟ್ಟುವ ಹಿನ್ನಲೆ ಅಗತ್ಯವಿರುವ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ದಕ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವ ಗಡ್ಕರಿ ಅವರಿಗೆ ಮನವಿ ಮಾಡಿದರು.


ಇತ್ತೀಚೆಗಿನ
ಭಾರಿ ಮಳೆಯಿಂದ ಉಂಟಾಗಿರುವ ಭೂ
ಕುಸಿತದಿಂದಾಗಿ ರಸ್ತೆ ಸಂಪರ್ಕಕ್ಕೆ ಅಡಚಣೆಯುಂಟಾಗಿರುವ
ಬಗ್ಗೆ ಕೇಂದ್ರ ಹೆದ್ದಾರಿ ಹಾಗೂ
ಸಂಚಾರ ಸಚಿವರಾದ ಗಡ್ಕರಿಯವರನ್ನು ಭೇಟಿಯಾಗಿ
ಹೆದ್ದಾರಿ ದುರಸ್ತಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸದರು
ಮನವಿಗೆ ಸಲ್ಲಿಸಿದ್ದು ಸಕರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಬೇಡಿಕೆಗಳ
ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶೀಘ್ರದಲ್ಲಿ ಈಡೇರಿಸುವ
ಭರವಸೆ ನೀಡಿದ್ದಾರೆ. (ಚಿತ್ರ: ಸಾಂದಾರ್ಭಿಕ)