ಲಾಕ್ ಡೌನ್ ಎಫೆಟ್ಟ್ : ಹೆಚ್ಚುತ್ತಿದೆ ಹೋಟೆಲ್ ಮಾಲೀಕರ ಆತ್ಮಹತ್ಯೆ ಪ್ರಕರಣ, ಕಣ್ಮುಚ್ಚಿ ಕುಳಿತ ಸರ್ಕಾರ - BUNTS NEWS WORLD

 

ಲಾಕ್ ಡೌನ್ ಎಫೆಟ್ಟ್ : ಹೆಚ್ಚುತ್ತಿದೆ ಹೋಟೆಲ್ ಮಾಲೀಕರ ಆತ್ಮಹತ್ಯೆ ಪ್ರಕರಣ, ಕಣ್ಮುಚ್ಚಿ ಕುಳಿತ ಸರ್ಕಾರ

Share This

ಮುಂಬೈ : ಕೋವಿಡ್ ಸಂಬಂಧ ಎರಡೆರಡು ಭಾರಿ ಹೇರಲಾದ ಲಾಕ್ ಡೌನ್ ಎಫೆಕ್ಟ್ ಎಲ್ಲಾ ಉದ್ಯಮಗಳನ್ನು ಬುಡಮೇಲು ಮಾಡಿದೆ. ಅದರಲ್ಲಿ ಅತೀ ಹೆಚ್ಚು ತೊಂದರೆಗೊಳಗಾಗಿದ್ದು ಮಾತ್ರ ಹೋಟೆಲ್ ಉದ್ಯಮ.


ಕರ್ನಾಟಕ ಕರಾವಳಿಯ ಎಷ್ಟೋ ಮಂದಿಯ ಬದುಕನ್ನು ಕಟ್ಟಿ ಕೊಟ್ಟಿದ್ದ ಹೋಟೆಲ್ ಉದ್ಯಮ ಇಂದು ಅಕ್ಷರಶಃ ನಲುಗಿ ಹೋಗಿದೆ. ಲಾಕ್ ಡೌನ್ ಸಮಯದಲ್ಲಿ ಕಟ್ಟಡ ಮಾಲೀಕರು ಬಾಡಿಗೆ ವಿನಾಯಿತಿ ಮಾಡದಿರುವುದು, ಇಷ್ಟೆಲ್ಲಾ ಕಷ್ಟಗಳ ನಡುವೆ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ತೆರಿಗೆ ಕಟ್ಟಿಸಿಕೊಳ್ಳುತ್ತಿರುವುದು ನಿಜಕ್ಕೂ ಹೋಟೆಲ್ ಉದ್ದಿಮೆದಾರರ ಬದುಕನ್ನು ಹಿಂಡಿ ಹಿಪ್ಪೆಯಾಗಿಸಿದೆ.


ಬೇಗನೆ ಲಾಕ್ ಡೌನ್ ತೆರವುಗೊಂಡು ಮತ್ತೆ ವ್ಯವಹಾರವನ್ನು ಸರಿದಾರಿ ತರುವ ಆಶಾ ಭಾವನೆ ಹೊಂದಿದ್ದ ಎಷ್ಟೋ ಮಂದಿ ಹೋಟೆಲ್ ಉದ್ದಿಮೆದಾರರು ಮತ್ತೆ ಮತ್ತೆ ಹೇರಲಾಗುತ್ತಿರುವ ಲಾಕ್ ಡೌನ್’ಗೆ ಬೆಸತ್ತು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದು ನಿಜಕ್ಕೂ ಘಟನೆಯ ತೀವ್ರತೆಯನ್ನು ತೋರಿಸುತ್ತದೆ. ಇವರನ್ನೆ ನಂಬಿಕೊಂಡಿದ್ದ ಹೋಟೆಲ್ ಕಾರ್ಮಿಕರ ಕಷ್ಟದ ಪಾಡು ಜೀವನ ನಿರ್ವಹಣೆಯನ್ನೆ ಅತಂತ್ರವಾಗಿಸಿದೆ.


ಇವೆಲ್ಲದರೂ ನಡುವೆ ಸರ್ಕಾರ ನಿಗದಿತ ಅವಧಿಗೆ ಹೋಟೆಲ್ ವ್ಯವಹಾರಕ್ಕೆ ಅವಕಾಶ ನೀಡಿರುವದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಎನೂ ಪ್ರಯೋಜನವಾಗಿಲ್ಲ. ಅದೇ ಹೋಟೆಲ್ ಮುಂದೆ ಯಾವುದೇ ತೆರಿಗೆ ಕಟ್ಟದ ಯಾವುದೇ ನಿರ್ಬಂಧವಿಲ್ಲದ ಬೀದಿಬದಿ ತಿಂಡಿ-ತಿನಿಸಿನ ವ್ಯಾಪಾರ ಎಗ್ಗಿಲ್ಲದೆ ನಡೆಯುತ್ತಿದ್ದು ಹೋಟೆಲ್ ಉದ್ಯಮವನ್ನೇ ಅಣಕಿಸುವಂತಿದೆ.


ಇನ್ನಾದರೂ ಸರ್ಕಾರ ತಾರತಮ್ಯ ಮಾಡದೇ ಹೋಟೆಲ್ ಉದ್ದಿಮೆದಾರ, ಕಾರ್ಮಿಕರ ಕಷ್ಟಕ್ಕೆ ನೆರವಾಗಲಿ, ಸಾಲು ಸಾಲು ಹೋಟೆಲ್ ಉದ್ದಿಮೆದಾರರ ಆತ್ಮಹತ್ಯೆಗಳು ನಿಲ್ಲಲಿ. ಹೋಟೆಲ್ ಉದ್ದಿಮೆ ಮುಂಚಿನಂತೆ ಬೆಳಗಲಿ.

Pages